ಬೆಂಗಳೂರು ಅರಮನೆ ಮೈದಾನ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಮತ್ತು ಸದಾನಂದಗೌಡರ ನಡುವೆ ಆತ್ಮೀಯ ಮಾತು!

ಬೆಂಗಳೂರು ಅರಮನೆ ಮೈದಾನ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಮತ್ತು ಸದಾನಂದಗೌಡರ ನಡುವೆ ಆತ್ಮೀಯ ಮಾತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 20, 2024 | 7:32 PM

ಈ ಬಾರಿ ಟಿಕೆಟ್ ಸಿಗದೆ ಹೋದಾಗ ಸದಾನಂದಗೌಡರು ವಿಪರೀತ ಬೇಸರ ಮಾಡಿಕೊಂಡಿದ್ದರು. ಅವರು ಯಾವ ಮಟ್ಟಿಗೆ ಹತಾಷರಾಗಿದ್ದರೆಂದರೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಯೂ ಹರಡಿತ್ತು. ಆದರೆ, ಅಂಥ ಪ್ರಯತ್ನವೇನೂ ಅವರು ಮಾಡಲಿಲ್ಲ. ಪಕ್ಷದಲ್ಲೇ ಉಳಿದು ಅದರ ಶುದ್ಧೀಕರಣ ಮಾಡಿ ಮತ್ತು ಪ್ರಧಾನಿ ಮೋದಿಯವರ ಕೈ ಬಲಪಡಿಸುವುದಾಗಿ ಅವರು ಹೇಳಿದ್ದರು.

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಬೃಹತ್ ಜೆಡಿಎಸ್-ಬಿಜೆಪಿ ಸಮಾವೇಶದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರದ ಅಭ್ಯರ್ಥಿಗಳ ಪ್ರಚಾರ ಮಾಡಿದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ನಗರದ ಅರಮನೆ ಮೈದಾನದಲ್ಲಿ (Palace Grounds) ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ (BJP convention) ಬೆಂಗಳೂರಿನ 3 ಲೋಕಸಭಾ ಅಭ್ಯರ್ಥಿಗಳು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಾಗಿ ಮತ ಯಾಚಿಸಿದರು. ಅವರು ವೇದಿಕೆಗೆ ಆಗಮಿಸಿದಾಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಂಗಳೂರು ಕರಗದ ವಿಶೇಷ ಶಾಲು ಹೊದಿಸಿ ಗೌರವಿಸಿದರು. ನಂತರ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಯವರಿಗೆ ಶ್ರೀರಾಮನ ಮೂರ್ತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಬೆಂಗಳೂರು ಉತ್ತರ ಸಂಸದ ಡಿವಿ ಸದಾನಂದಗೌಡ ನಡುವೆ ನಡೆದ ಆತ್ಮೀಯ ಮಾತುಕತೆಯನ್ನು ಗಮನಿಸಿ.

ನಿಮಗೆ ನೆನಪಿರಬಹುದು, ಈ ಬಾರಿ ಟಿಕೆಟ್ ಸಿಗದೆ ಹೋದಾಗ ಸದಾನಂದಗೌಡರು ವಿಪರೀತ ಬೇಸರ ಮಾಡಿಕೊಂಡಿದ್ದರು. ಅವರು ಯಾವ ಮಟ್ಟಿಗೆ ಹತಾಷರಾಗಿದ್ದರೆಂದರೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಯೂ ಹರಡಿತ್ತು. ಆದರೆ, ಅಂಥ ಪ್ರಯತ್ನವೇನೂ ಅವರು ಮಾಡಲಿಲ್ಲ. ಪಕ್ಷದಲ್ಲೇ ಉಳಿದು ಅದರ ಶುದ್ಧೀಕರಣ ಮಾಡಿ ಮತ್ತು ಪ್ರಧಾನಿ ಮೋದಿಯವರ ಕೈ ಬಲಪಡಿಸುವುದಾಗಿ ಅವರು ಹೇಳಿದ್ದರು. ಗೌಡರು ಪ್ರಧಾನಿಯವರೊಂದಿಗೆ ಮಾತಾಡಿದ ರೀತಿ ಗಮನಿಸಿದರೆ ಯಾವುದೇ ಬೇಸರ ಅವರ ಮನಸಲ್ಲಿ ಉಳಿದಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್ ಸೇರಲ್ಲ, ಪಕ್ಷದ ಶುದ್ಧೀಕರಣ ನನ್ನ ಮುಂದಿನ ಗುರಿಯಾಗಿದೆ: ಡಿವಿ ಸದಾನಂದಗೌಡ, ಬಿಜೆಪಿ ನಾಯಕ