AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಸೇರಲ್ಲ, ಪಕ್ಷದ ಶುದ್ಧೀಕರಣ ನನ್ನ ಮುಂದಿನ ಗುರಿಯಾಗಿದೆ: ಡಿವಿ ಸದಾನಂದಗೌಡ, ಬಿಜೆಪಿ ನಾಯಕ

ಕಾಂಗ್ರೆಸ್ ಸೇರಲ್ಲ, ಪಕ್ಷದ ಶುದ್ಧೀಕರಣ ನನ್ನ ಮುಂದಿನ ಗುರಿಯಾಗಿದೆ: ಡಿವಿ ಸದಾನಂದಗೌಡ, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 21, 2024 | 1:13 PM

ತಮ್ಮ ಬಗ್ಗೆ ಜನ ಮತ್ತು ಮಾಧ್ಯಮಗಳು ಚರ್ಚಿಸುತ್ತಿರುವ ಅಂಶಗಳನ್ನು ಪಟ್ಟಿಮಾಡಿಕೊಂಡಿದ್ದ ಗೌಡರು ಒಂದೊಂದಾಗಿ ಎಲ್ಲ ಸಂದೇಹಗಳಿಗೆ ಉತ್ತರ ನೀಡಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರುವುದಕ್ಕೆ ತಮಗೆ ಬೇಸರವಾಗಿರುವುದು ನಿಜ ಎಂದ ಸದಾನಂದಗೌಡರು ಕಾಂಗ್ರೆಸ್ ಪಕ್ಷದ ನಾಯಕರಿಂದ ಪಕ್ಷ ಸೇರುವಂತೆ ಆಹ್ವಾನ ಬಂದಿದ್ದು ಸತ್ಯವೆಂದರು.

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದಗೌಡ (DV Sadananda Gowda) ಮಂಗಳವಾರದಂದು ಒಕ್ಕಲಿಗರ ಸಂಘದ (Vokkaliga Sangha) ಪದಾಧಿಕಾರಿಗಳನ್ನು ಭೇಟಿಯಾದ ಬಳಿಕ ಬುಧವಾರ ಒಂದು ಪ್ರೆಸ್ ಮೀಟ್ ನಡೆಸಿ ತಮ್ಮ ಮುಂದಿನ ನಡೆ ಹೇಳೋದಾಗಿ ತಿಳಿಸಿದ್ದರು. ಆದರೆ ಅವರು ನಿನ್ನೆ ಪತ್ರಿಕಾ ಗೋಷ್ಟಿ (press meet) ನಡೆಸದೆ ಇವತ್ತು ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು. ತಮ್ಮ ಬಗ್ಗೆ ಜನ ಮತ್ತು ಮಾಧ್ಯಮಗಳು ಚರ್ಚಿಸುತ್ತಿರುವ ಅಂಶಗಳನ್ನು ಪಟ್ಟಿಮಾಡಿಕೊಂಡಿದ್ದ ಗೌಡರು ಒಂದೊಂದಾಗಿ ಎಲ್ಲ ಸಂದೇಹಗಳಿಗೆ ಉತ್ತರ ನೀಡಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರುವುದಕ್ಕೆ ತಮಗೆ ಬೇಸರವಾಗಿರುವುದು ನಿಜ ಎಂದ ಸದಾನಂದಗೌಡರು ಕಾಂಗ್ರೆಸ್ ಪಕ್ಷದ ನಾಯಕರಿಂದ ಪಕ್ಷ ಸೇರುವಂತೆ ಆಹ್ವಾನ ಬಂದಿದ್ದು ಸತ್ಯವೆಂದರು.

ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ ಎಂಬ ಕುತೂಹಲ ಕನ್ನಡಿಗರಲ್ಲಿದ್ದಿದ್ದು ಸುಳ್ಳಲ್ಲ. ಸದಾನಂದ ಗೌಡರು ತಾನು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ ಅಂತ ಸ್ಪಷ್ಟವಾದ ಮತುಗಳಲ್ಲಿ ಹೇಳಿದರು. ಬಿಜೆಪಿಯ ಶುದ್ಧೀಕರಣ ತಮ್ಮ ಮುಂದಿನ ನಡೆಯಾಗಿದೆ ಎಂದ ಅವರು ರಾಜ್ಯ ಬಿಜೆಪಿ ನಾಯಕರು ತಮಗೆ ಭರವಸೆಗಳನ್ನು ನೀಡಿ ವಂಚಿಸಿದ್ದಕ್ಕೆ ಮುಂದೆ ಪಶ್ಚಾತ್ತಾಪ ಪಡಲಿದ್ದಾರೆಂದು ಹೇಳಿದರು. ತಮ್ಮ ಪರವಾಗಿ ನಿಂತಿರುವ ಸಂಘ ಸಂಸ್ಥೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವುದಾಗಿ ಸಂಸದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಡಿವಿ ಸದಾನಂದಗೌಡರನ್ನು ಸಂಪರ್ಕಿಸಿದ ಬಿಜೆಪಿ ಹೈಕಮಾಂಡ್; ಚಿಕ್ಕಬಳ್ಳಾಪುರದ ಟಿಕೆಟ್ ಆಫರ್