ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ; ಇಸ್ರೋ ಭೇಟಿ ನೇರಪ್ರಸಾರ ಇಲ್ಲಿದೆ ನೋಡಿ

ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ; ಇಸ್ರೋ ಭೇಟಿ ನೇರಪ್ರಸಾರ ಇಲ್ಲಿದೆ ನೋಡಿ

ವಿವೇಕ ಬಿರಾದಾರ
|

Updated on:Aug 26, 2023 | 6:18 AM

ಇಸ್ರೊ ವಿಜ್ಞಾನಿಗಳ ಪರಿಶ್ರಮದಿಂದ ಚಂದ್ರಯಾನ-3 ಯಶಸ್ವಿಯಾಗಿದೆ. ಈ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಪಿಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳ ಜೊತೆ ಕೆಲ ಹೊತ್ತು ಮಾತನಾಡಲಿದ್ದಾರೆ. ಇನ್ನು ರಾಜ್ಯ ವಿಧಾನಸಭೆ ಚುನಾವಣೆಯಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೊದಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.

ಚಂದ್ರಯಾನ-3ಯ ವಿಕ್ರಂ ಲ್ಯಾಂಡರ್​​ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಮೂಲಕ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾಗಿದೆ. ಈ ಚಂದ್ರಯಾನ-3ಗೆ ಹಗಲಿರುಳು ಶ್ರಮಿಸಿದ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು (ಆ.26) ದಕ್ಷಿಣ ಆಫ್ರಿಕಾ, ಗ್ರೀಕ್ ಪ್ರವಾಸ ಮುಗಿಸಿಕೊಂಡು ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ನಗರದ ಪೀಣ್ಯದಲ್ಲಿರುವ ಇಸ್ರೋ (ISRO) ಕೇಂದ್ರಕ್ಕೆ ಬರಲಿದ್ದಾರೆ. ಇಲ್ಲಿ ಕೆಲಹೊತ್ತು ವಿಜ್ಞಾನಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಕುರಿತಾದ ಕ್ಷಣ ಕ್ಷಣ ಅಪ್ಡೆಟ್ಸ್​​ ಟಿವಿ9 ಡಿಜಿಟಲ್​​​​ನಲ್ಲಿ……

Published on: Aug 26, 2023 06:13 AM