PM Narendra Modi in Karnataka: ವೇದಿಕೆಯ ಮೇಲೆ ಬಂದ ಪ್ರಧಾನಿ ಹಿಂದೆ ನಿಂತಿದ್ದ ಯಡಿಯೂರಪ್ಪನವರನ್ನು ಮುಂದೆ ಕರೆದರು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 25, 2023 | 5:09 PM

ಮೋದಿ ವೇದಿಕೆ ಮೇಲಿರುವವರಿಗೆ ಮತ್ತು ಜನರಿಗೆ ಕೈ ಮುಗಿಯುತ್ತಾ ನಡೆದು ಬರುತ್ತಾ ಹಿಂದೆ ನಿಂತಿದ್ದ ಯಡಿಯೂರಪ್ಪರನ್ನು ಕೈ ಸನ್ನೆಯ ಮೂಲಕ ಮುಂದೆ ಬರುವಂತೆ ಹೇಳುತ್ತಾರೆ.

ದಾವಣಗೆರೆ: ರಾಜ್ಯದ ಅತ್ಯಂತ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರನ್ನು (BS Yediyurappa) ಕಡೆಗಣಿಸಲಾಗುತ್ತಿದೆ ಅನ್ನೋದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದ್ದನ್ನು ನಿಮಗೆ ತೋರಿಸಿದ್ದೇವೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರಾಜ್ಯಕ್ಕೆ ಬಂದಾಗ ಮತ್ತು ವೇದಿಕೆಯ ಮೇಲೆ ಯಡಿಯೂರಪ್ಪನವರೂ ಇದ್ದರೆ ಸನ್ನಿವೇಶವೇ ಬದಲಾಗುತ್ತದೆ ಅನ್ನೋದನ್ನು ನಾವು ಇಲ್ಲಿ ತೋರಿಸುತ್ತಿದ್ದೇವೆ. ಇಂದು ವಿಜಯ ಸಂಕಲ್ಪ ಯಾತ್ರೆ (Vijaya Sankalp Yatre) ಮಹಾಸಂಗಮ ಯಾತ್ರೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ವೇದಿಕೆ ಮೇಲೆ ಬರುವುದನ್ನು ಗಮನಿಸಿ. ಮೋದಿ ವೇದಿಕೆ ಮೇಲಿರುವವರಿಗೆ ಮತ್ತು ಜನರಿಗೆ ಕೈ ಮುಗಿಯುತ್ತಾ ನಡೆದು ಬರುತ್ತಾ ಹಿಂದೆ ನಿಂತಿದ್ದ ಯಡಿಯೂರಪ್ಪರನ್ನು ಕೈ ಸನ್ನೆಯ ಮೂಲಕ ಮುಂದೆ ಬರುವಂತೆ ಹೇಳುತ್ತಾರೆ. ಬಿಎಸ್ ವೈ ಮುಂದೆ ಬಂದು ಜನರತ್ತ ಕೈ ಬೀಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.