ಲಕ್ಷದ್ವೀಪದಲ್ಲಿ ಸ್ನೋರ್ಕೆಲ್ಲಿಂಗ್ ನಡೆಸಿ ಮತ್ತೊಮ್ಮೆ ತಮ್ಮ ಸಾಹಸಮಯ ಪ್ರವೃತ್ತಿ ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ

|

Updated on: Jan 04, 2024 | 6:52 PM

ಸ್ನೋರ್ಕೆಲ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್ ನಡುವೆ ವ್ಯತ್ಯಾಸವಿದೆ. ಸ್ಕೂಬಾ ಡೈವರ್ ಗಳು ಈಜುತ್ತಾ ಸಮುದ್ರ ಇಲ್ಲವೇ ಸಾಗರದಾಳಕ್ಕೆ ಹೋಗುತ್ತಾರೆ. ಸ್ನೋರ್ಕೆಲ್ಲಿಂಗ್ ನಲ್ಲಿ ಸಮುದ್ರದ ಮೇಲ್ಮೈ ಮೇಲೆ ಈಜಾಡಲಾಗುತ್ತದೆ. ಯಾರಿಗ್ಗೊತ್ತು? ಮುಂದಿನ ಭೇಟಿ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ಕೂಬಾ ಡೈವಿಂಗ್ ಗೆ ಪ್ರಯತ್ನಿಸಿದರೂ ಆಶ್ಚರ್ಯಪಡಬೇಕಿಲ್ಲ.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸಾಹಸಮಯ ಪ್ರವೃತ್ತಿಯವರು (adventurous) ಅಂತ ಎಲ್ಲರಿಗೂ ಗೊತ್ತು. ಕಳೆದ ವರ್ಷ ನವೆಂಬರ್ 25 ರಂದು ಅವರು ಬೆಂಗಳೂರಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ತೇಜಸ್ ವಿಮಾನಗಳ ತಯಾರಿಕಾ ಸೌಲಭ್ಯ ಮತ್ತು ಘಟಕದ ತಾಂತ್ರಿಕ ಸವಲತ್ತುಗಳನ್ನು ಪರಿಶೀಲಿಸಲು ಆಗಮಿಸಿದ್ದಾಗ ಅವಳಿ ಆಸನಗಳ ತೇಜಸ್ ಲಘು ಯುದ್ಧ ವಿಮಾನದಲ್ಲಿ ಸುಮಾರು ಅರ್ಧಗಂಟೆ ಕಾಲ ಹಾರಾಟ ನಡೆಸಿದ್ದರು. ಹಾರಾಟದ ದೃಶ್ಯಗಳನ್ನು ಖುದ್ದು ಪ್ರಧಾನಿ ಮೋದಿಯವರೇ ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಯಾಕೆ ಹೇಳಬೇಕಾಯಿತೆಂದರೆ, ಅವರು ಇತ್ತ್ತೀಚಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಸಮಯದಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದರು. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವ ಹಾಗೆ ಅವರು ಸ್ನೋರ್ಕೆಲ್ ಧರಿಸಿ ಸಮುದ್ರದಲ್ಲಿ ಈಜಿದರು.

ಇಲ್ಲಿನ ಫೋಟೋಗಳನ್ನು ಸಹ ಅವರು ತಮ್ಮ X ಹ್ಯಾಂಡಲ್​ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಟುವಟಿಕೆ ಸ್ನೋರ್ಕೆಲ್ಲಿಂಗ್ ಅಂತ ಕರೆಸಿಕೊಳ್ಳುತ್ತದೆ. ಸ್ನೋರ್ಕೆಲ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್ ನಡುವೆ ವ್ಯತ್ಯಾಸವಿದೆ. ಸ್ಕೂಬಾ ಡೈವರ್ ಗಳು ಈಜುತ್ತಾ ಸಮುದ್ರ ಇಲ್ಲವೇ ಸಾಗರದಾಳಕ್ಕೆ ಹೋಗುತ್ತಾರೆ. ಸ್ನೋರ್ಕೆಲ್ಲಿಂಗ್ ನಲ್ಲಿ ಸಮುದ್ರದ ಮೇಲ್ಮೈ ಮೇಲೆ ಈಜಾಡಲಾಗುತ್ತದೆ. ಯಾರಿಗ್ಗೊತ್ತು? ಮುಂದಿನ ಭೇಟಿ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ಕೂಬಾ ಡೈವಿಂಗ್ ಗೆ ಪ್ರಯತ್ನಿಸಿದರೂ ಆಶ್ಚರ್ಯಪಡಬೇಕಿಲ್ಲ. ಅವರ ಪ್ರವೃತ್ತಿಯೇ ಹಾಗೆ, ಹೊಸ ಹೊಸ ಸಾಹಸಗಳನ್ನು ಮಾಡೋದು!

 

In addition to the scenic beauty, Lakshadweep’s tranquility is also mesmerising. It gave me an opportunity to reflect on how to work even harder for the welfare of 140 crore Indians. pic.twitter.com/VeQi6gmjIM

— Narendra Modi (@narendramodi) January 4, 2024

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on