‘ಪ್ರತಾಪ್​ಗೆ ಹೀಗಾಯ್ತು ಎಂಬ ಸುದ್ದಿ ಕೇಳಿ ಬೇಸರ ಆಯ್ತು’; ರಕ್ಷಕ್​ ಮೊದಲ ಪ್ರತಿಕ್ರಿಯೆ

‘ಪ್ರತಾಪ್​ಗೆ ಹೀಗಾಯ್ತು ಎಂಬ ಸುದ್ದಿ ಕೇಳಿ ಬೇಸರ ಆಯ್ತು’; ರಕ್ಷಕ್​ ಮೊದಲ ಪ್ರತಿಕ್ರಿಯೆ

Malatesh Jaggin
| Updated By: ಮದನ್​ ಕುಮಾರ್​

Updated on: Jan 04, 2024 | 7:25 PM

ಬಿಗ್​ ಬಾಸ್​ ಮನೆಯಿಂದ ಕೆಲವು ಕಹಿ ಸುದ್ದಿಗಳು ಕೇಳಿಬರುತ್ತಿವೆ. ಡ್ರೋನ್​ ಪ್ರತಾಪ್​ ಅವರ ಆರೋಗ್ಯ ಕೈ ಕೊಟ್ಟಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯ ಬಗ್ಗೆ ಮಾಜಿ ಸ್ಪರ್ಧಿ ರಕ್ಷಕ್​ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ರಕ್ಷಕ್​ (Rakshak) ಸ್ಪರ್ಧಿಸಿದ್ದರು. ಬಳಿಕ ಅವರು ಎಲಿಮಿನೇಟ್ ಆಗಿ ಹೊರಬಂದರು. ಈಗ ಅವರು ಪ್ರತಿದಿನ ಬಿಗ್​ ಬಾಸ್​ (Bigg Boss Kannada) ಎಪಿಸೋಡ್​ ನೋಡುತ್ತಿದ್ದಾರೆ. ಸದ್ಯ ದೊಡ್ಮನೆಯಿಂದ ಕೆಲವು ಕಹಿ ಸುದ್ದಿ ಕೇಳಿಬರುತ್ತಿವೆ. ಡ್ರೋನ್​ ಪ್ರತಾಪ್​ (Drone Prathap) ಅವರ ಆರೋಗ್ಯ ಕೈ ಕೊಟ್ಟಿದೆ. ಅದರ ಬಗ್ಗೆ ರಕ್ಷಕ್​ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಬಿಗ್​ ಬಾಸ್​ ಬಗ್ಗೆ ವಿವಾದಗಳು ಕೇಳಿಬಂದಾಗ ಮನಸ್ಸಿಗೆ ಬೇಸರ ಆಗುತ್ತದೆ. ಬಿಗ್​ ಬಾಸ್​ನಲ್ಲಿ ಒಂದು ಕುಟುಂಬ ಇದ್ದಂಗೆ ಇರುತ್ತದೆ. ಅಲ್ಲಿ ಯಾರಿಗೆ ತೊಂದರೆ ಆದರೂ ಕೂಡ ನಮ್ಮ ಫ್ಯಾಮಿಲಿಗೆ ತೊಂದರೆ ಆದಂತೆ. ಇತ್ತೀಚೆಗೆ ಸಂಗೀತಾ ಮತ್ತು ಪ್ರತಾಪ್​ ಅವರ ಕಣ್ಣಿಗೆ ಏಟಾಗಿತ್ತು. ಈಗ ಪ್ರತಾಪ್​ ಅವರಿಗೆ ತೊಂದರೆ ಆಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದು ಗೊತ್ತಾಯಿತು. ಆ ಸುದ್ದಿ ಕೇಳಿ ತುಂಬ ಬೇಸರ ಆಯ್ತು’ ಎಂದು ರಕ್ಷಕ್​​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ