ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಮತ್ತು ಜೀಪ್ ಸಫಾರಿಗೆ ತೆರಳಿದ ಪ್ರಧಾನಿ ಮೋದಿ

|

Updated on: Mar 09, 2024 | 12:31 PM

ಕೈಯಲ್ಲಿ ದುರ್ಬೀನು ಹಿಡಿದು ಪ್ರಧಾನಿ ಮೋದಿ ಜೀಪ್ ನಲ್ಲೂ ಸಫಾರಿಗೆ ತೆರಳಿ ಸುತ್ತಲಿನ ದೃಶ್ಯಗಳನ್ನು ನೋಡುತ್ತಾ ಉದ್ಯಾನವನದ ಸುತ್ತು ಹಾಕಿದರು. ಉದ್ಯಾನವನದ ಸಿಬ್ಬಂದಿ ಜೊತೆ ಒಂದಷ್ಟು ಸಮಯ ಕಳೆದು ಅವರ ಕಷ್ಟಸುಖ ವಿಚಾರಿಸಿದರು. ಅಂತಿಮವಾಗಿ ಪ್ರಧಾನಿ ಮೋದಿ ಡಫ್ಲಾಂಗ್ ವಾಚ್ ಟಾವರ್ ಹತ್ತಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ವಿಹಂಗಮ ದೃಶ್ಯ ಕಣ್ತುಂಬಿಕೊಂಡರು.

ಗುವಹಾಟಿ (ಅಸ್ಸಾಂ): ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅಸ್ಸಾಂ ಪ್ರವಾಸದಲ್ಲಿದ್ದಾರೆ. ಪ್ರಧಾನಿಯವರು ವನ್ಯ ಮತ್ತು ವನ್ಯಜೀವಿಗಳ (wildlife) ಬಗ್ಗೆ ಅಪಾರ ಆಸಕ್ತಿ ಹೊಂದಿರುವುದು ಭಾರತೀಯರಿಗೆ ಗೊತ್ತಿರದ ವಿಷಯವೇನಲ್ಲ. ಹಾಗಾಗಿ ಅಸ್ಸಾಂ ಪ್ರವಾಸದಲ್ಲಿರುವಾಗ ಅವರು ವಿಶ್ವದ ಅತ್ಯಂತ ವಿಸ್ತೃತ, ವಿಶಾಲ ಮತ್ತು ರಮಣೀಯ ಉದ್ಯಾನವನ ಎನಿಸಿಕೊಂಡಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ (Kaziranga National Park) ಭೇಟಿ ನೀಡದಿರುತ್ತಾರೆಯೇ? ಅಸಲಿಗೆ ಶುಕ್ರವಾರ ಸಾಯಂಕಾಲದಿಂದ ಪ್ರಧಾನಿ ಮೋದಿ ಇಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಅನೆಯೊಂದರ ಮೇಲೆ ಉದ್ಯಾನವನ ಸಫಾರಿ ಹೊರಟು ಸುರ್ಯೋದಯವನ್ನು ವೀಕ್ಷಿಸಿದರು. ನಂತರ ಅವರು ಅಲ್ಲಿನ ಆನೆಗಳಿಗೆ ಕಬ್ಬು ತಿನಿಸಿದ್ದನ್ನು ದೃಶ್ಯಗಳಲ್ಲಿ ನೋಡಬಹುದು. ಕೈಯಲ್ಲಿ ದುರ್ಬೀನು ಹಿಡಿದು ಪ್ರಧಾನಿ ಮೋದಿ ಜೀಪ್ ನಲ್ಲೂ ಸಫಾರಿಗೆ ತೆರಳಿ ಸುತ್ತಲಿನ ದೃಶ್ಯಗಳನ್ನು ನೋಡುತ್ತಾ ಉದ್ಯಾನವನದ ಸುತ್ತು ಹಾಕಿದರು. ಉದ್ಯಾನವನದ ಸಿಬ್ಬಂದಿ ಜೊತೆ ಒಂದಷ್ಟು ಸಮಯ ಕಳೆದು ಅವರ ಕಷ್ಟಸುಖ ವಿಚಾರಿಸಿದರು. ಅಂತಿಮವಾಗಿ ಪ್ರಧಾನಿ ಮೋದಿ ಡಫ್ಲಾಂಗ್ ವಾಚ್ ಟಾವರ್ ಹತ್ತಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ವಿಹಂಗಮ ದೃಶ್ಯ ಕಣ್ತುಂಬಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಘೇಂಡಾಮೃಗವೊಂದು ಸಫಾರಿ ಜೀಪ್ ಗಳ ಬೆನ್ನಟ್ಟಿ ಪ್ರವಾಸಿಗರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸಿತು!