ಬಿಗಿ ಭದ್ರತಾ ಏರ್ಪಾಟುಗಳೊಂದಿಗೆ ಇಂದಿನಿಂದ ಪುನರಾರಂಭಗೊಂಡ ದಿ ರಾಮೇಶ್ವರಂ ಕೆಫೆ
ಬಾಂಬ್ ಸ್ಫೋಟಗೊಂಡ ಬಳಿಕ ನಿಶ್ಚಿತವಾಗಿ ವಿಚಲಿತರಾಗಿದ್ದ ದಿ ರಾಮೇಶ್ವರಂ ಕೆಫೆಯ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ರಾವ್ ಹೋಟೆಲ್ ಅನ್ನು ನಿನ್ನೆ ರೀಓಪನ್ ಮಾಡೋದಾಗಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಅದು ನಿನ್ನೆ ಸಂಭವಿಸಲಿಲ್ಲ, ಇವತ್ತು ಆರಂಭಗೊಂಡಿದೆ.
ಬೆಂಗಳೂರು: ಕಳೆದ ಶುಕ್ರವಾರ ಅಂದರೆ ಮಾರ್ಚ್ ಒಂದರಂದು ನಡೆದ ಬಾಂಬ್ ಸ್ಫೋಟ (Bomb blast) ಪ್ರಕರಣದ ಬಳಿಕ ಮುಚ್ಚಿದ್ದ ನಗರದ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆ (The Rameshwaram Café) ಇಂದಿನಿಂದ ಪುನರಾರಂಗೊಂಡು ಗ್ರಾಹಕ ಸೇವೆ ಶುರುಮಾಡಿದೆ. ಕೆಫೆ ಖಾಯಂ ಗ್ರಾಹಕರು (customers) ಎಂದಿನಂತೆ ಬಂದು ತಮ್ಮ ಇಷ್ಟದ ತಿಂಡಿಗಳನ್ನು ತಿನ್ನುತ್ತಿದ್ದಾರೆ ಮತ್ತು ಟೀ-ಕಾಫೀ ಸವಿಯುತ್ತಿದ್ದಾರೆ. ಆದರೆ, ಕೆಫೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೃಶ್ಯಗಳಲ್ಲಿ ಕಾಣುತ್ತಿರುವ ಹಾಗೆ ಪ್ರವೇಶದ್ವಾರದ ಬಳಿ ಮೆಟಲ್ ಡಿಟೆಕ್ಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲಿ ಕಾವಲು ನಿಂತಿರುವ ಭದ್ರತಾ ಸಿಬ್ಬಂದಿ ಕೆಫೆಗೆ ಆಗಮಿಸುತ್ತಿರುವ ಪ್ರತಿಯೊಬ್ಬನ ಗ್ರಾಹಕನ ಬ್ಯಾಗ್ ಗಳನ್ನು ಪರೀಕ್ಷಿಸುತ್ತಿದ್ದಾರೆ. ನಿಮಗೆ ನೆನಪಿರಬಹುದು, ಬಾಂಬ್ ಸ್ಫೋಟಗೊಂಡ ಬಳಿಕ ನಿಶ್ಚಿತವಾಗಿ ವಿಚಲಿತರಾಗಿದ್ದ ದಿ ರಾಮೇಶ್ವರಂ ಕೆಫೆಯ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ರಾವ್ ಹೋಟೆಲ್ ಅನ್ನು ನಿನ್ನೆ ರೀಓಪನ್ ಮಾಡೋದಾಗಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಅದು ನಿನ್ನೆ ಸಂಭವಿಸಲಿಲ್ಲ, ಇವತ್ತು ಆರಂಭಗೊಂಡಿದೆ. ಬೆಂಗಳೂರು ಮತ್ತು ಕರ್ನಾಟಕದ ಜನ ಅವರ ಜೊತೆ ನಿಂತಿದ್ದಾರೆ, ಆತಂಕಿತರಾಗುವ ಅವಶ್ಯಕತೆಯಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ
