ದೆಹಲಿ: ದೆಹಲಿಯ ತಾಲ್ಕಟೋರ ಕ್ರೀಡಾಂಗಣದಲ್ಲಿ ಇಂದು ಕನ್ನಡದ ಕಲರವ ಮಾರಾಯ್ರೇ. ದೆಹಲಿ ಕರ್ನಾಟಕ ಸಂಘದ (Delhi Karnataka Sangha) ಅಮೃತ ಮಹೋತ್ಸವ ಸಾಂಸ್ಕೃತಿಕ ಮೇಳದ ಉದ್ಘಾಟನಾ ಸಮಾರಂಭವನ್ನು ತಾಲ್ಕಟೋರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು ಮತ್ತು ಅದನ್ನು ಉದ್ಘಾಟಿಸಿದವರು ಬೇರೆ ಯಾರೂ ಅಲ್ಲ, ಸೋಮವಾರದಂದು ಮತ್ತೊಮ್ಮೆ ಕರ್ನಾಟಕಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi). ನಿರೂಪಕರ ಘೋಷಣೆಯ ನಡುವೆ ಪ್ರಧಾನಿ ಮೋದಿ ಡೋಲು (drum) ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿಟಿ ರವಿ ಅವರಲ್ಲದೆ ಹಲವಾರು ಮಠಾಧೀಶರು ಹಾಜರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ