ಪ್ರಾಣ ಪ್ರತಿಷ್ಠೆ ವಿಧಿವಿಧಾನ ನೆರವೇರಿದ ಬಳಿಕ ಬಾಲರಾಮನಿಗೆ ಸಾಷ್ಟಾಂಗವೆರಗಿದ ಪ್ರಧಾನಿ ನರೇಂದ್ರ ಮೋದಿ

|

Updated on: Jan 22, 2024 | 7:29 PM

ಪ್ರಧಾನಿ ಮೋದಿ ಮೊದಲು ಪವಿತ್ರಸ್ಥಳಕ್ಕೆ ತಮ್ಮ ಹಣೆ ಒತ್ತುತ್ತಾರೆ, ಅಮೇಲೆ ತಮ್ಮ ಕಣ್ಣಗಳನ್ನು ಒತ್ತುತ್ತಾರೆ. ನಮಸ್ಕರಿಸಿ ಮೇಲೆದ್ದ ಬಳಿಕ ವೈದಿಕ ಆಚಾರ್ಯರೊಬ್ಬರು ಪ್ರಧಾನಿಯವರಿಗೆ ಪ್ರಸಾದ ನೀಡುತ್ತಾರೆ. ಪ್ರಸಾದ ಸ್ವೀಕರಿಸಿದ ನಂತರ ಅವರು ತಮ್ಮ ಬಲಪಾರ್ಶ್ವದಲ್ಲಿ ಆಸೀನರಾಗಿದ್ದ ಹಿರಿಯ ವೈದಿಕ ಅಚಾರ್ಯರ ಪಾದಗಳಿಗೆ ನಮಸ್ಕರಿಸುತ್ತಾರೆ.

ಅಯೋಧ್ಯೆ: ಭಾರತೀಯರೆಲ್ಲ ಕಾತುರ ಮತ್ತು ಭಕ್ತಿಶ್ರದ್ಧೆಯಿಂದ ಕಾಯುತ್ತಿದ್ದ ಸಂದರ್ಭ ಸಾಕಾರಗೊಂಡಿದೆ. ರಾಮಮಂದಿರ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ (Ram temple consecration ritual) ನೆರವೇರಿದೆ. ಕಾರ್ಯಾಕ್ರಮದಲ್ಲಿ ಮುಖ್ಯ ಯಜಮಾನನಾಗಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಪೂಜಾ ಕೈಂಕರ್ಯಗಳು ಮತ್ತು ಮಹಾಮಂಗಳಾರತಿ ನೆರವೇರಿದ ಬಳಿಕೆ ಗರ್ಭಗುಡಿಯಲ್ಲಿ ಬಾಲರಾಮನಿಗೆ (Ram Lalla) ಪ್ರದಕ್ಷಿಣೆ ಹಾಕುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪ್ರದಕ್ಷಿಣೆ ಬಳಿಕ ಅವರು ಬಾಲರಾಮ ವಿಗ್ರಹದ ಮುಂದೆ ಬಂದು ಭಕ್ತಿ ಮತ್ತು ಶ್ರದ್ಧೆಯಿಂದ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರು ದೀರ್ಘದಂಡ ನಮಸ್ಕಾರ ಮಾಡುವುದನ್ನು ಗಮನಿಸಿ. ಮೊದಲು ಪವಿತ್ರಸ್ಥಳಕ್ಕೆ ತಮ್ಮ ಹಣೆ ಒತ್ತುತ್ತಾರೆ, ಅಮೇಲೆ ತಮ್ಮ ಕಣ್ಣಗಳನ್ನು ಒತ್ತುತ್ತಾರೆ. ನಮಸ್ಕರಿಸಿ ಮೇಲೆದ್ದ ಬಳಿಕ ವೈದಿಕ ಆಚಾರ್ಯರೊಬ್ರು ಪ್ರಧಾನಿಯವರಿಗೆ ಪ್ರಸಾದ ನೀಡುತ್ತಾರೆ. ಪ್ರಸಾದ ಸ್ವೀಕರಿಸಿದ ನಂತರ ಅವರು ತಮ್ಮ ಬಲಪಾರ್ಶ್ವದಲ್ಲಿ ಆಸೀನರಾಗಿದ್ದ ಹಿರಿಯ ವೈದಿಕ ಅಚಾರ್ಯರ ಪಾದಗಳಿಗೆ ನಮಸ್ಕರಿಸುತ್ತಾರೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯದ ಗವರ್ನರ್ ಆನಂದಿ ಬೆನ್ ಪಟೇಲ್ ಸಹ ಅರ್ಚಕರಿಂದ ಪ್ರಸಾದ ಸ್ವೀಕರಿಸಿವುದನ್ನು ನೋಡಬಹದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 22, 2024 02:41 PM