ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ: ಸುಂದರ ಮೂರ್ತಿ ಹೀಗಿದೆ ನೋಡಿ

ಅಯೋಧ್ಯೆ ರಾಮಮಂದಿರದಲ್ಲಿ ಇಂದು ರಾಮ ಲಲ್ಲಾನ ಪ್ರತಿಷ್ಠೆಯಾಗಿದೆ. ಗರ್ಭಗುಡಿಯಲ್ಲಿ ಬಾಲರಾಮ ವಿರಾಜಮಾನನಾಗಿ ಕುಳಿತುಕೊಂಡಿದ್ದಾರೆ. ರಾಮ ಲಲ್ಲಾ ಮೂರ್ತಿಯ ಬಗ್ಗೆ ಗೊಂದಲಗಳು ಸೃಷ್ಟಿಯಾಗಿತ್ತು. ಈ ಬಗ್ಗೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿತ್ತು. ಆದರೆ ಇದು ರಾಮನ ಮೂರ್ತಿ ಅಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದರು. ಇದೀಗ ರಾಮನ ಮೂರ್ತಿ ಅನಾವರಣ ಆಗಿದೆ.

Follow us
ಅಕ್ಷಯ್​ ಪಲ್ಲಮಜಲು​​
|

Updated on:Jan 22, 2024 | 1:05 PM

ಅಯೋಧ್ಯೆ, ಜನವರಿ 22: ಅಯೋಧ್ಯೆ ರಾಮಮಂದಿರದಲ್ಲಿ ಇಂದು ರಾಮ ಲಲ್ಲಾನ ಪ್ರತಿಷ್ಠೆಯಾಗಿದೆ. ಗರ್ಭಗುಡಿಯಲ್ಲಿ ಬಾಲರಾಮ ವಿರಾಜಮಾನನಾಗಿ ಕುಳಿತುಕೊಂಡಿದ್ದಾರೆ. ರಾಮ ಲಲ್ಲಾ ಮೂರ್ತಿಯ ಬಗ್ಗೆ ಕೆಲವು ದಿನಗಳ ಹಿಂದೆ ಗೊಂದಲಗಳು ಸೃಷ್ಟಿಯಾಗಿತ್ತು. ಈ ಬಗ್ಗೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿತ್ತು. ಆದರೆ ಇದು ರಾಮನ ಮೂರ್ತಿ ಅಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದರು. ಇದೀಗ ರಾಮನ ಮೂರ್ತಿ ಅನಾವರಣ ಆಗಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠೆಗೊಂಡಿರುವ ಬಾಲರಾಮನ ಮೂರ್ತಿಗೆ ಚಿನ್ನದ ತಿಲಕ, ಚಿನ್ನದ ಬಾಣ, ಬಿಲ್ಲು ಚಿನ್ನಾಭರಣ, ವಜ್ರ, ಹರಳುಗಳಿಂದ ತಯಾರಿಸಿದ ಕಿರೀಟ, ಚಿನ್ನ, ಹರಳುಗಳಿಂದ ತಯಾರಾಗಿರುವ ಬಾಲರಾಮನ ಕಿರೀಟವನ್ನು ಇಲ್ಲಿ ಕಾಣಬಹುದು. ರಾಮ ಲಲ್ಲಾ ಸುಂದರ ಮೂರ್ತಿಯ ಈ ವಿಡಿಯೋ ಇಲ್ಲಿದೆ. ಇನ್ನು ವೈರಲ್​​​ ಆಗಿರುವ ರಾಮ ಲಲ್ಲಾ ಮೂರ್ತಿಯ ಚಿತ್ರ ಬಗ್ಗೆ ತನಿಖೆ ನಡೆಸಬೇಕೆಂದು ಸತ್ಯೇಂದ್ರ ದಾಸ್ ಆಗ್ರಹಿಸಿದ್ದರು. ಪ್ರಾಣ ಪ್ರತಿಷ್ಠೆ ಪೂರ್ಣಗೊಳ್ಳುವ ಮುನ್ನ ಮುಚ್ಚಿರುವ ಬಾಲ ರಾಮ ಮೂರ್ತಿಯ ಕಣ್ಣುಗಳನ್ನು ತೆರೆಯುವುದಿಲ್ಲ. ಶ್ರೀರಾಮನ ಕಣ್ಣುಗಳು ಕಾಣುವ, ವೈರಲ್ ಆಗಿರುವ ವಿಗ್ರಹವು ನಿಜವಾದುಲ್ಲ. ಮೂರ್ತಿಯ ಕಣ್ಣುಗಳು ಕಾಣುವಂಥ ಫೋಟೊ ಬಹಿರಂಗವಾಗಿದ್ದೇ ಹೌದಾದರೆ ಯಾರಿಂದ ಆಯಿತು ಎಂಬುದರ ಕುರಿತು ತನಿಖೆಯಾಗಬೇಕು. ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದನ್ನು ಪತ್ತೆಮಾಡಬೇಕು ಎಂದು ಆಚಾರ್ಯ ಸತ್ಯೇಂದ್ರ ದಾಸ್ ಆಗ್ರಹಿಸಿದ್ದರು.

Published On - 12:59 pm, Mon, 22 January 24