ಗದಗ – ರಾಮ ಯಾಗದಲ್ಲಿ ಕೋತಿ ಪ್ರತ್ಯಕ್ಷ! ಯಾಗ ವಿಧಿಗಳ ವೀಕ್ಷಿಸುತ್ತ ಕುಳಿತ ವಾನರ ರೂಪಿ ಹನುಮ!
ಗದಗ ಜಿಲ್ಲೆ ಲಕ್ಷ್ಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ನಡೆದ ಹೋಮ ಯಾಗದಲ್ಲಿ ವಾನರ ರೂಪಿ ಹನುಮ ಭಾಗಿಯಾಗಿದ್ದಾನೆ. ರಾಮ ಪ್ರಾಣ ಪ್ರತಿಷ್ಠಾಪನೆ ದಿನದ ಅಂಗವಾಗಿ ಯಾಗ ಆಯೋಜಿಸಲಾಗಿತ್ತು. ಆ ವೇಳೆ ಪ್ರತ್ಯಕ್ಷನಾದ ಮಂಗ ಯಾಗ ವಿಧಿಗಳನ್ನ ವೀಕ್ಷಿಸುತ್ತ ಕುಳಿತಿತ್ತು. ಗದಗ ಯೋಗ ತಂಡದಿಂದ ದೇವಸ್ಥಾನದಲ್ಲಿ ಅಗ್ನಿಹೋತ್ರ ಹೋಮ ಆಯೋಜನೆಗೊಂಡಿತ್ತು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ನಡೆದ ಹೋಮ ಯಾಗದಲ್ಲಿ ವಾನರ ರೂಪಿ ಹನುಮ ಭಾಗಿಯಾಗಿದ್ದಾನೆ. ರಾಮ ಪ್ರಾಣ ಪ್ರತಿಷ್ಠಾಪನೆ ದಿನದ ಅಂಗವಾಗಿ ಯಾಗ ಆಯೋಜಿಸಲಾಗಿತ್ತು. ಆ ವೇಳೆ ಪ್ರತ್ಯಕ್ಷನಾದ ಮಂಗ ಯಾಗ ವಿಧಿಗಳನ್ನ ವೀಕ್ಷಿಸುತ್ತ ಕುಳಿತಿತ್ತು. ಗದಗ ಯೋಗ ತಂಡದಿಂದ ದೇವಸ್ಥಾನದಲ್ಲಿ ಅಗ್ನಿಹೋತ್ರ ಹೋಮ ಆಯೋಜನೆಗೊಂಡಿತ್ತು. ಹೋಮ ಆರಂಭವಾಗುತ್ತಿದ್ದಂತೆ ಕೋತಿ ಎಂಟ್ರಿ ಕೊಟ್ಟಿತ್ತು. ಸುತ್ತಲು ಜನ ಕೂತಿದ್ದರೂ ಯಾಗ ಸ್ಥಳಕ್ಕೆ ಕೋತಿ ಸಾಗ ಬಂದಿತು. ದೀಪ, ಹೋಮ ಸಾಮಗ್ರಿಗಳನ್ನ ಮುಟ್ಟಿ ಚೆಕ್ ಮಾಡಿದಂತೆ ಕೋತಿ ವರ್ತಿಸುತ್ತಿತ್ತು. ಕೋತಿ ವರ್ತನೆಯಿಂದ ಯಾಗದಲ್ಲಿ ಭಾಗಿಯಾಗಿದ್ದ ರಾಮ ಭಕ್ತರು ಆಶ್ಚರ್ಯಗೊಂಡಿದ್ದು, ಆಂಜನೇಯ ಸ್ವಾಮಿಯೇ ಸ್ಥಳಕ್ಕೆ ಬಂದು ಎಲ್ಲರನ್ನೂ ಆಶೀರ್ವದಿಸಿದ್ದಾನೆ ಎಂದು ಭಾವಿಸಿದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos