ಮುಖ್ಯ ಯಜಮಾನನಾಗಿ ರಾಮಮಂದಿರ ಪ್ರಾಣ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ

ಮುಖ್ಯ ಯಜಮಾನನಾಗಿ ರಾಮಮಂದಿರ ಪ್ರಾಣ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 22, 2024 | 1:49 PM

ಕಾಶಿಯ ಪ್ರಖ್ಯಾತ ವೈದಿಕ ಆಚಾರ್ಯ ಆಗಿರುವ ಗಣೇಶ್ವರ್ ದ್ರಾವಿಡ್ ಹಾಗೂ ಲಕ್ಷ್ಮಿಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆಯ ವಿಧಿವಿಧಾನ ನೆರವೇರಲ್ಪಡುತ್ತಿರುವುದನ್ನು ವಿಡಿಯೋ ನೋಡಬಹುದು. ಇವರಿಬ್ಬರಲ್ಲದೆ ದೇಶದ ಬೇರೆ ಬೇರೆ ಭಾಗಗಳಿಂದ ಆಮಂತ್ರಿಸಲ್ಪಟ್ಟಿರುವ 121 ವೈದಿಕ ಆಚಾರ್ಯರು ಪೂಜಾ ವಿಧಿಗಳಲ್ಲಿ ಭಾಗಿಯಾಗಿದ್ದಾರೆ.

ಅಯೋಧ್ಯೆ: ಅಯೋಧ್ಯೆಯಲ್ಲಿ ಸುಂದರ, ರಮಣೀಯ ಮತ್ತು ಭವ್ಯವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Ram Temple Consecration Ceremony) ಒಬ್ಬ ಮುಖ್ಯ ಯಜಮಾನನಾಗಿ (Chief Yajaman) ಭಾಗಿಯಾದರು. ಪ್ರಧಾನಿಯವರು ಬಾಲರಾಮ ಪ್ರತಿಷ್ಠಾಪನೆಗೊಂಡಿರುವ ಗರ್ಭಗುಡಿಯೊಳಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat), ಉತ್ತರ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಪ್ರವೇಶಿಸಿ ಭಕ್ತಿಪೂರ್ವಕವಾಗಿ ರಾಮಲಲ್ಲಾನ ಎದುರು ಕೂರುವುದನ್ನು ಚಿತ್ರಗಳಲ್ಲಿ ನೋಡಬಹುದು. ಪ್ರಧಾನಿಯವರ ಎಡಭಾಗದಲ್ಲಿ ಮೋಹನ್ ಭಾಗವತ್ ಆಸೀನರಾಗುತ್ತಾರೆ. ಕಾಶಿಯ ಪ್ರಖ್ಯಾತ ವೈದಿಕ ಆಚಾರ್ಯ ಆಗಿರುವ ಗಣೇಶ್ವರ್ ದ್ರಾವಿಡ್ ಹಾಗೂ ಲಕ್ಷ್ಮಿಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆಯ ವಿಧಿವಿಧಾನ ನೆರವೇರಲ್ಪಡುತ್ತಿರುವುದನ್ನು ವಿಡಿಯೋ ನೋಡಬಹುದು. ಇವರಿಬ್ಬರಲ್ಲದೆ ದೇಶದ ಬೇರೆ ಬೇರೆ ಭಾಗಗಳಿಂದ ಆಮಂತ್ರಿಸಲ್ಪಟ್ಟಿರುವ 121 ವೈದಿಕ ಆಚಾರ್ಯರು ಪೂಜಾ ವಿಧಿಗಳಲ್ಲಿ ಭಾಗಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ