PM Narendra Modi: ಪ್ರಧಾನಿ ಮೋದಿ 36 ಗಂಟೆಗಳಲ್ಲಿ, 7 ಕಾರ್ಯಕ್ರಮ, 8 ನಗರ, 5,300 ಕಿ.ಮೀ. ಪ್ರಯಾಣ
ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಸಮುದ್ರದ ಅಲೆಯಂತೆ ಪ್ರವಾಸ ಮಾಡುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 24ರ ಸೋಮವಾರದಿಂದ 36 ಗಂಟೆಗಳಲ್ಲಿ 7 ನಗರಗಳ ಮೂಲಕ 5,300 ಕಿ.ಮೀ.ಗೂ ಹೆಚ್ಚು ಪ್ರಯಾಣಿಸಲಿದ್ದಾರೆ ಮತ್ತು ಎಂಟು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ಎಂದ ಮೇಲೆ ಎಲ್ಲ ಕಡೆ ಹೋಗಬೇಕು, ಕಾರ್ಯಕ್ರಮಗಳಲ್ಲಿ ಭಾಗಿಯಾಗಲೇಬೇಕು. ಚುನಾವಣೆ ಅಂತೂ ಬಂದರೆ ಬಿಡುವಿಲ್ಲದ ಕೆಲಸ, ಇದರ ಜತೆಗೆ ಸಾರ್ವಜನಿಕ ಭೇಟಿ, ಮನೆ, ಕುಟುಂಬ ಎಲ್ಲವನ್ನು ಸುಧಾರಿಸಿಕೊಂಡು ಹೋಗುವ ಹೊಣೆ, ದೇಶದ ಭದ್ರತೆ, ದೇಶದ ಆರ್ಥಿಕತೆ, ಅಬ್ಬಬ್ಬಾ ಎಲ್ಲವನ್ನು ಎಷ್ಟು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಬೇಕು. ಸ್ವಲ್ಪ ವ್ಯತ್ಯಾಸವಾದರೂ ಪ್ರಧಾನಿಯೇ ಹೊಣೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ 72ರ ವಯಸ್ಸಿನಲ್ಲಿ ದಣಿವಿಲ್ಲದೆ ದುಡಿಯುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಮಧ್ಯಪ್ರದೇಶಕ್ಕೆ, ನಂತರ ದಕ್ಷಿಣದ ಕೇರಳಕ್ಕೆ, ನಂತರ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ಪಶ್ಚಿಮದಲ್ಲಿ ದಮನ್ ಮತ್ತು ದಿಯುಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಸಮುದ್ರದ ಅಲೆಯಂತೆ ಪ್ರವಾಸ ಮಾಡುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 24ರ ಸೋಮವಾರದಿಂದ 36 ಗಂಟೆಗಳಲ್ಲಿ 7 ನಗರಗಳ ಮೂಲಕ 5,300 ಕಿ.ಮೀ.ಗೂ ಹೆಚ್ಚು ಪ್ರಯಾಣಿಸಲಿದ್ದಾರೆ ಮತ್ತು ಎಂಟು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.