ಆವಾಸ್ ಯೋಜನೆಯಡಿ ಹಕ್ಕುಪತ್ರ ವಿತರಿಸಿ ಮಾತಾಡುವಾಗ ಬಾಲ್ಯ ನೆನಸಿಕೊಂಡು ಭಾವುಕರಾದ ಪ್ರಧಾನಿ ಮೋದಿ
ಸಾವಿರಾರು ಜನರ ಕನಸು ನನಸಾಗಿದ್ದು ಕಂಡು ಅತೀವ ಸಮತೋಷವೆನಿಸುತ್ತಿದೆ ಎಂದು ಹೇಳಿದ ಮೋದಿ ಜನರ ಆಶೀರ್ವಾದವೇ ನನ್ನ ಬಹುದೊಡ್ಡ ಆಸ್ತಿ ಎಂದರು. ಮುಂದುವರಿದು ಮಾತಾಡಿದ ಅವರು, ಈ ಯೋಜನೆಯ ಶಿಲಾನ್ಯಾಸ ಮಾಡಲು ಬಂದಾಗ ಜನರಿಗೆ ಮನೆಗಳ ಬೀಗದ ಕೈ ಕೊಡಲು ತಾನೇ ಬರೋದಾಗಿ ನೀಡಿದ ಗ್ಯಾರಂಟಿ ಸಾಕಾರಗೊಂಡಿದೆ ಎಂದರು.
ಸೋಲಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸಾರ್ವಜನಿಕ ಸಮಾರಂಭಗಳ ವೇದಿಕೆ ಮೇಲೆ ಭಾವುಕರಾಗೋದು ವಿರಳ ಸಂದರ್ಭಗಳಲ್ಲಿ ಮಾತ್ರ. ಮಹರಾಷ್ಟ್ರದ ಸೋಲಾಪುರ (Solapur) ನಗರದ ಜನ ಅಂಥ ವಿರಳ ಸಂದರ್ಭವೊಂದನ್ನು ಇವತ್ತು ವೀಕ್ಷಿಸಿದರು. ನಗರದಲ್ಲಿಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ (PMAY-U Scheme) ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಮಾತಾಡಿದ ಪ್ರಧಾನ ಮಂತ್ರಿ ತಮ್ಮ ಬಾಲ್ಯದ ದಿನಗಳನ್ನು ನೆನೆದು ಭಾವುಕರಾದರು. ಇಂಥ ಮನೆಗಳಲ್ಲಿ ವಾಸ ಮಾಡಬೇಕೆಂದು ತನಗೆ ಅನಿಸುತಿತ್ತು, ಅಂತ ಹೇಳಿ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯಲು ನೀರು ಕುಡಿದು ಕೆಲ ಕ್ಷಣಗಳವರೆಗೆ ಮಾತಾಡದೆ, ಭಾವನೆಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಸಾವಿರಾರು ಜನರ ಕನಸು ನನಸಾಗಿದ್ದು ಕಂಡು ಅತೀವ ಸಮತೋಷವೆನಿಸುತ್ತಿದೆ ಎಂದು ಹೇಳಿದ ಮೋದಿ ಜನರ ಆಶೀರ್ವಾದವೇ ನನ್ನ ಬಹುದೊಡ್ಡ ಆಸ್ತಿ ಎಂದರು. ಮುಂದುವರಿದು ಮಾತಾಡಿದ ಅವರು, ಈ ಯೋಜನೆಯ ಶಿಲಾನ್ಯಾಸ ಮಾಡಲು ಬಂದಾಗ ಜನರಿಗೆ ಮನೆಗಳ ಬೀಗದ ಕೈ ಕೊಡಲು ತಾನೇ ಬರೋದಾಗಿ ನೀಡಿದ ಗ್ಯಾರಂಟಿ ಸಾಕಾರಗೊಂಡಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ