ರಾಮನಗರದಲ್ಲಿ ಶಂಕಿತ ಪಿಎಫ್ ಐ ಕಾರ್ಯಕರ್ತರು ಪೊಲೀಸರ ವಶಕ್ಕೆ, ಅವರು ಅಮಾಯಕರೆಂದ ಕುಟುಂಬಸ್ಥರು
ಶಂಕಿತರ ಕುಟುಂಬಗಳ ಸದಸ್ಯರು ಐಜೂರು ಪೊಲೀಸ್ ಠಾಣೆಯ ಮುಂದೆ ಜಮಾವಣೆಗೊಂಡು ತಮ್ಮ ಕುಟುಂಬಗಳ ಸದಸ್ಯರನ್ನು ವಿನಾಕಾರಣ ವಶಕ್ಕೆ ತೆಗೆದುಕೊಳ್ಳಲಾಗಿದೆ, ಅವರೆಲ್ಲ ಅಮಾಯಕರು ಎಂದು ಪೊಲೀಸರೊಂದಿಗೆ ವಾದಿಸಿದರು.
ರಾಮನಗರ: ಮಂಗಳೂರಲ್ಲಿ ಪೀಪಲ್ಸ್ ಫ್ರಂಟ್ ಆಫ್ ಇಂಡಿಯ (PFI) ಮತ್ತು ಸೋಶಲಿಸ್ಟ್ ಡೆಮೊಕ್ರ್ಯಾಟಿಕ್ ಪಾರ್ಟಿ ಆಫ್ ಇಂಡಿಯ (SDPI) ಕಾರ್ಯಕರ್ತರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಾಳಿ ನಡೆಸಿ ಹಲವರನ್ನು ಬಂಧಿಸಿದ ಬಳಿಕ ರಾಜ್ಯಾದ್ಯಂತ ಶಂಕಿತ ಕಾರ್ಯಕರ್ತರ ಮನೆಗಳ ಮೇಲೆ ದಾಳಿಗಳು ನಡೆಯುತ್ತಿವೆ. ರಾಮನಗರ ಮತ್ತು ಸುತ್ತಮುತ್ತ ಸ್ಥಳಗಳಲ್ಲಿ ದಾಳಿಗಳು ನಡೆದಿದ್ದು ಲಭ್ಯವಿರುವ ಮಾಹಿತಿ ಪ್ರಕಾರ ಪೊಲೀಸರು 9 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಶಂಕಿತರ ಕುಟುಂಬಗಳ ಸದಸ್ಯರು ಐಜೂರು ಪೊಲೀಸ್ ಠಾಣೆಯ ಮುಂದೆ ಜಮಾವಣೆಗೊಂಡು ತಮ್ಮ ಕುಟುಂಬಗಳ ಸದಸ್ಯರನ್ನು ವಿನಾಕಾರಣ ವಶಕ್ಕೆ ತೆಗೆದುಕೊಳ್ಳಲಾಗಿದೆ, ಅವರೆಲ್ಲ ಅಮಾಯಕರು ಎಂದು ಪೊಲೀಸರೊಂದಿಗೆ ವಾದಿಸಿದರು.