ಪೇಸಿಎಮ್ ಅಂದರೆ ಪೇ ಕಾಂಗ್ರೆಸ್ ಮೇಡಂ, ಪೇ ಮಾಡಿಯೇ ಸಿದ್ದರಾಮಯ್ಯ ಸಿಎಮ್ ಆಗಿದ್ದು! ನಳಿನ್ ಕುಮಾರ್ ಕಟೀಲ್

ಪೇಸಿಎಮ್ ಅಂದರೆ ಪೇ ಕಾಂಗ್ರೆಸ್ ಮೇಡಂ, ಪೇ ಮಾಡಿಯೇ ಸಿದ್ದರಾಮಯ್ಯ ಸಿಎಮ್ ಆಗಿದ್ದು! ನಳಿನ್ ಕುಮಾರ್ ಕಟೀಲ್

TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 27, 2022 | 4:04 PM

ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲೆಂದೇ ಡಿಕೆ ಶಿವಕುಮಾರ ಈ ಪದವನ್ನು ಹುಟ್ಟು ಹಾಕಿದ್ದಾರೆ, ಪಾಪ, ಸಿದ್ದರಾಮಯ್ಯ ಅದನ್ನು ಅರ್ಥಮಾಡಿಕೊಳ್ಳದೆ ಅಭಿಯಾನ ನಡೆಸುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ವಿಜಯಪುರ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ (Nalin Kumar Kateel) ಅವರು ಕಾಂಗ್ರೆಸ್ ನಡೆಸುತ್ತಿರುವ ಪೇಸಿಎಮ್ ಅಭಿಯಾನದ ವ್ಯಾಖ್ಯಾನವನ್ನೇ ಬದಲಾಯಿಸಿಬಿಟ್ಟರು. ಮಂಗಳವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಕಾಂಗ್ರೆಸ್ ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ ಭ್ರಷ್ಟ ಆಡಳಿತ ನೀಡಿದರು, ಸಿದ್ದರಾಮಯ್ಯನವರು (Siddaramaiah) ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಕಪ್ಪ ನೀಡಿಯೇ ಸಿಎಮ್ ಆದರು ಅಂತ ಹೇಳಿದರು. ಪೇಸಿಮ್ ಅಂದರೆ ‘ಪೇ ಕಾಂಗ್ರೆಸ್ ಮೇಡಮ್’ ಅಂತರ್ಥ, ಕಪ್ಪ ನೀಡಿದವರು ಸಿದ್ದರಾಮಯ್ಯ ಆಗಿರುವುದರಿಂದ ‘ಸಿಎಮ್ ಪೇ’ ಮಾಡಿದರು! ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲೆಂದೇ ಡಿಕೆ ಶಿವಕುಮಾರ ಪದವನ್ನು ಹುಟ್ಟು ಹಾಕಿದ್ದಾರೆ, ಪಾಪ ಸಿದ್ದರಾಮಯ್ಯ ಅದನ್ನು ಅರ್ಥಮಾಡಿಕೊಳ್ಳದೆ ಅಭಿಯಾನ ನಡೆಸುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

Published on: Sep 27, 2022 12:26 PM