ಪಾಕಿಸ್ತಾನದಲ್ಲಿ ಭಯಾನಕ ಮುಖವಾಡದೊಂದಿಗೆ ಜನರನ್ನು ಹೆದರಿಸುತ್ತಾ ಸ್ಯಾತಂತ್ರ್ಯೋತ್ಸವ ದಿನ ಆಚರಿಸುತ್ತಿದವನು ತನ್ನ ಸ್ವಾತಂತ್ರ್ಯ ಕಳೆದುಕೊಂಡ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 11, 2021 | 4:15 PM

ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್ ಅವರು ಈ ಎರಡನೇಯವನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ 8-ಸೆಕೆಂಡ್ ಅವಧಿಯ ವಿಡಿಯೋನಲ್ಲಿ ವ್ಯಕ್ತಿಯು ಜೈಲಿನಲ್ಲಿ ಮಾಸ್ಕ್ ತೆಗೆಯುತ್ತಿರುವುದು ಕಾಣಿಸುತ್ತದೆ.

ಈ ತೆರನಾದ ಆಲೋಚನೆಗಳು ಯಾಕೆ ಜನರಲ್ಲಿ ಹುಟ್ಟಿಕೊಳ್ಳುತ್ತವೆ ಅನ್ನೋದೇ ಗೊತ್ತಾಗುವುದಿಲ್ಲ. ತಾವು ಮಾಡುತ್ತಿರುವುದು ಸರಿಯಲ್ಲ ಅದರಿಂದ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಯಿದೆ ಎಂಬ ಅರಿವಿದ್ದರೂ ಜನ ಹಾಗೆ ಮಾಡುವುದನ್ನು ಮುಂದುವರಿಸುತ್ತಾರೆ. ನಿಮಗೆ ಪ್ರಾಯಶಃ ನೆನಪಿರಬಹುದು, ನಾವು ಆ ಬಗ್ಗೆ ವರದಿ ಸಹ ಮಾಡಿದ್ದೆವು. 2021ರ ಹೊಸ ವರ್ಷ ದಿನಾಚರಣೆಯಂದು ಪಾಕಿಸ್ತಾನದ ಪೇಶಾವರ್​ನಲ್ಲಿ ಒಬ್ಬ ವ್ಯಕ್ತಿ ಎಲ್ಲರೊಂದಿಗೆ ಸೇರಿ ಸಂಭ್ರಮಿಸುವುದನ್ನು ಬಿಟ್ಟು ಹೆದರಿಕೆ ಹುಟ್ಟುವಂಥ ಉಡುಪು ಧರಿಸಿ ಜನರಲ್ಲಿ ಆತಂಕ ಸೃಷ್ಟಿ ಮಾಡಲಾರಂಬಿಸಿದ್ದ. ಅಲ್ಲಿನ ಪೊಲೀಸರು ಅವನನ್ನು ಬಂಧಿಸಿ ಜೈಲಿಗಟ್ಟಿದ್ದರು. ಸರಿಯಾಗಿ ಎಂಟು ತಿಂಗಳ ನಂತರ ಅದೇ ನಗರದಲ್ಲಿ ಅವನಂಥದ್ದೇ ಕಿತಾಪತಿ ಮಾಡಿದ ಇನ್ನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮೊದಲನೇಯವನು ಹೆದರಿಕೆ ಹುಟ್ಟುವಂಥ ಉಡುಪು ಧರಿಸಿದ್ದರೆ ಎರಡನೇಯವನು ಭೂತದ ಮುಖವಾಡ ಧರಿಸಿ ಜನರನ್ನು ಹೆದರಿಸಿದ್ದಾನೆ

ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್ ಅವರು ಈ ಎರಡನೇಯವನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ 8-ಸೆಕೆಂಡ್ ಅವಧಿಯ ವಿಡಿಯೋನಲ್ಲಿ ವ್ಯಕ್ತಿಯು ಜೈಲಿನಲ್ಲಿ ಮಾಸ್ಕ್ ತೆಗೆಯುತ್ತಿರುವುದು ಕಾಣಿಸುತ್ತದೆ.

ತಮ್ಮ ಟ್ವೀಟ್​ನಲ್ಲಿ ಇನಾಯತ್, ‘ಪೆಶಾವರ್​ನಲ್ಲಿ ಬಂಧಿತನಾಗಿರುವ ಈ ವ್ಯಕ್ತಿ ಜನರನ್ನು ಹೆದರಿಸಿ ಸ್ಯಾತಂತ್ರ್ಯೋತ್ಸವ ದಿನವನ್ನು ಆಚರಿಸಬೇಕೆಂದುಕೊಂಡಿದ್ದ. ಆದರೆ, ಪೊಲೀಸರು ಅವನನ್ನು ಮಾಸ್ಕ್ ಧರಿಸಿರುವ ಸಂದರ್ಭದಲ್ಲೇ ಬಂಧಿಸಿದ್ದಾರೆ,’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾಗಿಯಾಗಲು ತಯಾರಾಗಿದ್ದೀರಾ? ಎಲ್ಲಿ ನೀವು ಹಾಡಿರುವ ರಾಷ್ಟ್ರಗೀತೆ ವಿಡಿಯೋ?