ವರ್ತೂರು ಸಂತೋಷನನ್ನು ಸನ್ಮಾನಿಸಿದ ಪೊಲೀಸ್ ಇನ್ಸ್​ಪೆಕ್ಟರ್ ವರ್ತೂರುನಿಂದ ಆಡುಗೋಡಿಗೆ ಟ್ರಾನ್ಸ್​ಫರ್!

ವರ್ತೂರು ಸಂತೋಷನನ್ನು ಸನ್ಮಾನಿಸಿದ ಪೊಲೀಸ್ ಇನ್ಸ್​ಪೆಕ್ಟರ್ ವರ್ತೂರುನಿಂದ ಆಡುಗೋಡಿಗೆ ಟ್ರಾನ್ಸ್​ಫರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 10, 2024 | 5:12 PM

ಸಂತೋಷ್ ಬಗ್ಗೆ ಯಾಕೆ ಹೇಳಬೇಕಾಗಿದೆಯೆಂದರೆ, ಇವರನ್ನು ಸನ್ಮಾನ ಮಾಡಲು ಇಲಾಖಾ ಸಮವಸ್ತ್ರ ಧರಿಸಿ ವರ್ತೂರಿನ ಫಾರ್ಮ್ ಹೌಸ್ ಗೆ ಹೋಗಿದ್ದ ಅಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ತಿಮ್ಮರಾಯಪ್ಪರನ್ನು ಪೊಲೀಸ್ ಕಮೀಶನರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ!

ಬೆಂಗಳೂರು: ಮಾಧ್ಯಮಗಳಲ್ಲಿ ಮಿಂಚಬೇಕೆನ್ನುವ ಉಮೇದಿ ಕೆಲವು ಸಲ ದುಬಾರಿಯಾಗಬಹುದು ಮಾರಾಯ್ರೇ. ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ (BBK season 10) ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ (Varthur Santosh) ರಾಜ್ಯದಮಟ್ಟಿಗೆ ಈಗ ಸೆಲಿಬ್ರಿಟಿ. ಸೀಸನ್ ನಡೆಯುತ್ತಿದ್ದಾಗ ಹುಲಿಯುಗುರಿನ ಪೆಂಡೆಂಟ್ ಧರಿಸಿದ್ದ ಕಾರಣ ಅರೆಸ್ಟ್ ಆದ ಬಳಿಕ ಸಂತೋಷ್ ಜನಪ್ರಿಯತೆ ಏಕ್ದಂ ಏರುತ್ತಾ ಹೋಯಿತು. ನಂತರ ಅವರ ಮದುವೆಗೆ ಸಂಬಂಧಿಸಿದ ಸುದ್ದಿ ಮತ್ತು ವಿಡಿಯೋಗಳು ಮತ್ತಷ್ಟು ಜನಪ್ರಿಯತೆ ಒದಗಿಸಿದವು. ಅವರು ವಿನ್ನರ್ ಆಗಲಿಲ್ಲವಾದರೂ ಟಾಪ್ 5 ನಲ್ಲಿದ್ದರು. ಸಂತೋಷ್ ಬಗ್ಗೆ ಯಾಕೆ ಹೇಳಬೇಕಾಗಿದೆಯೆಂದರೆ, ಇವರನ್ನು ಸನ್ಮಾನ ಮಾಡಲು ಇಲಾಖಾ ಸಮವಸ್ತ್ರ ಧರಿಸಿ ವರ್ತೂರಿನ ಫಾರ್ಮ್ ಹೌಸ್ ಗೆ ಹೋಗಿದ್ದ ಅಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ತಿಮ್ಮರಾಯಪ್ಪರನ್ನು (Thimmarayappa) ಪೊಲೀಸ್ ಕಮೀಶನರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ! ಹೌದು ಮಾರಾಯ್ರೆ, ಪಾಪ ತಿಮ್ಮರಾಯಪ್ಪಂಗೂ ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇತ್ತೆಂದು ಕಾಣುತ್ತದೆ. ಡ್ಯೂಟಿಯಲ್ಲಿರದ ಸಮಯದಲ್ಲಿ ಸಿವಿಲ್ ವಸ್ತ್ರ ಧರಿಸಿ ಹೋಗಿದ್ದರೆ, ಅದು ಪ್ರಮಾದ ಅನಿಸಿಕೊಳ್ಳುತ್ತಿರಲಿಲ್ಲ. ಮಾಡಿದ ತಪ್ಪಿಗೆ ಎತ್ತಂಗಡಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ