ಕೊಪ್ಪಳದಿಂದ ಹೊಸಪೇಟೆಗೆ ದಾಖಲೆರಹಿತ ರೂ. 5.55 ಲಕ್ಷ ಹಣ ಟಿಬಿ ಡ್ಯಾಂ ಚೆಕ್ ಪೋಸ್ಟ್ ಬಳಿ ಪೊಲೀಸ್ ವಶಕ್ಕೆ

|

Updated on: Mar 21, 2024 | 12:02 PM

ಇಂದು ಬೆಳಗ್ಗೆ ವಿಜಯನಗರದ ತುಂಗಭದ್ರಾ ಡ್ಯಾಂ ಬಳಿಯ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ ಸಾಗಿಸುತ್ತಿದ್ದ ರೂ. 5.55 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹಣ ಯಾರದ್ದು ಅಂತ ಗೊತ್ತಾಗಿಲ್ಲ ಅದರೆ ಕೊಪ್ಪಳದಿಂದ ಹೊಸಪೇಟೆಗೆ  ರವಾನಿಸಲಾಗುತ್ತಿತ್ತಂತೆ.

ವಿಜಯನಗರ: ಮುಂದಿನ ಎರಡು ತಿಂಗಳುವರೆಗೆ ಇಂಥ ದೃಶ್ಯಗಳು ಸಾಮಾನ್ಯವಾಗಲಿವೆ. ಲೋಕಸಭಾ ಚುನಾವಣೆಯಲ್ಲಿ (Lok Sabha Polls) ಸ್ಪರ್ಧಿಸುತ್ತಿರುವ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಣ ಹಂಚಲು ದಾಖಲೆರಹಿತ ಹಣವನ್ನು (unaccounted money) ಹೀಗೆ ತಮ್ಮ ನಂಬಿಗಸ್ತರ ಮೂಲಕ ದ್ವಿಚಕ್ರ ವಾಹನ, ಕಾರು ಅಥವಾ ಬೇರಾವುದೇ ಸಾರಿಗೆ ವ್ಯವಸ್ಥೆ (transport mode) ಮೂಲಕ ಕಳಿಸುತ್ತಿರುತ್ತಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಎಲ್ಲ ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸುವುದು ಇಂಥ ಅಕ್ರಮ ಹಣ, ವಸ್ತುಗಳ ಸಾಗಾಟವನ್ನು ತಡೆದು ಸೀಜ್ ಮಾಡುವುದಕ್ಕೋಸ್ಕರ. ಕೆಲವರು ಚೆಕ್ ಪೋಸ್ಟ್ ಗಳನ್ನು ವಂಚಿಸಿ ಹಣವನ್ನು ತಲುಪಿಸುವ ಸ್ಥಳಕ್ಕೆ ಹೋಗಿಬಿಡುತ್ತಾರೆ ಉಳಿದವರು ಇಲ್ಲಿ ದೃಶ್ಯಗಳಲ್ಲಿ ಕಾಣುತ್ತಿರುವ ಹಾಗೆ ಸಿಕ್ಹಾಕಿಕೊಳ್ಳುತ್ತಾರೆ. ಇಂದು ಬೆಳಗ್ಗೆ ವಿಜಯನಗರದ ತುಂಗಭದ್ರಾ ಡ್ಯಾಂ ಬಳಿಯ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ ಸಾಗಿಸುತ್ತಿದ್ದ ರೂ. 5.55 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹಣ ಯಾರದ್ದು ಅಂತ ಗೊತ್ತಾಗಿಲ್ಲ ಅದರೆ ಕೊಪ್ಪಳದಿಂದ ಹೊಸಪೇಟೆಗೆ  ರವಾನಿಸಲಾಗುತ್ತಿತ್ತಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭಾ ಚುನಾವಣೆ: ಗೃಹ ಸಚಿವ ಅಮಿತ್​ ಶಾರನ್ನು ಭೇಟಿಯಾದ ರಾಜ್​ ಠಾಕ್ರೆ