ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಜಲಪಾತದ ಬಳಿ ಚೆಲ್ಲಾಟವಾಡುತ್ತಿದ್ದ ಯುವಕರ ಬಟ್ಟೆ ಎತ್ಹಾಕಿಕೊಂಡು ಬಂದ ಪೊಲೀಸರು!

|

Updated on: Jul 10, 2024 | 10:24 AM

ಮಳೆಗಾಲದಲ್ಲಿ ಜಲಪಾತಗಳ ಕೆಳಗೆ ಆಟವಾಡೋದು ಅಪಾಯಕ್ಕೆ ಆಹ್ವಾನವಿತ್ತಂತೆ. ಇದನ್ನು ಅರ್ಥಮಾಡಿಕೊಳ್ಳಲು ರಾಕೆಟ್ ಸೈನ್ಸ್ ಓದುವ ಅವಶ್ಯಕತೆಯಿಲ್ಲ. ಜಾರುವ ಬಂಡೆಗಳ ಮೇಲೆ ನೀರು ಸಹ ಬೀಳುವುದರಿಂದ ಅವರು ಮತ್ತಷ್ಟು ಅಪಾಯಕಾರಿಯಾಗುತ್ತವೆ. ಪೊಲೀಸರು ಯುವಕರ ಒಳ್ಳೆಯದಕ್ಕಾಗಿ ಬುದ್ಧಿ ಹೇಳುತ್ತಾರೆಯೇ ಹೊರತು ಅವರಿಗೆ ಅದರಿಂದ ಅವರಿಗೇನೂ ಲಾಭವಿಲ್ಲ.

ಚಿಕ್ಕಮಗಳೂರು: ಈ ಮೂರ್ಖರಿಗೆ ಇಷ್ಟು ಶಿಕ್ಷೆ ಸಾಲದು. ಮಳೆ ಸುರಿದಾಗಲೆಲ್ಲ ಚಾರ್ಮಾಡಿ ಗುಡ್ಡ ಪ್ರದೇಶದಲ್ಲಿ ಕೃತಕ ಜಲಪಾತಗಳು ಸೃಷ್ಟಿಯಾಗುತ್ತವೆ. ಅವು ನೋಡಲಷ್ಟೇ ಚಂದ ಮತ್ತು ದೂರದಿಂದ ಸೆಲ್ಫೀಗಳನ್ನು ತೆಗೆದುಕೊಂಡರೂ ಅಡ್ಡಿಯಿಲ್ಲ. ಆದರೆ ಪ್ರವಾಸಕ್ಕೆ ಬಂದಿರುವ ಯುವ ಮೂರ್ಖರು ಮೇಲಿಂದ ಕೆಳಗೆ ಸುರಿಯುತ್ತಿರುವ ನೀರಿನ ಬಳಿ ಹೋಗಿ ಜಾರುವ ಬಂಡೆಗಳ ಮೇಲೆ ನಿಂತು ಚೆಲ್ಲಾಟವಾಡುತ್ತಿದ್ದರು. ಅದನ್ನು ಗಮನಿಸಿದ ಪೊಲೀಸರು ಅವರ ಬಟ್ಟೆಗಳನ್ನು ಎತ್ತಿಕೊಂಡು ರಸ್ತೆಗೆ ಬಂದಿದ್ದಾರೆ. ಅಯ್ಯೋ ಬಟ್ಟೆ ಹೋಯ್ತಲ್ಲ ಅಂತ ಯುವಕರು ಪೊಲೀಸರ ಬಳಿ ಓಡಿ ಬಂದಿದ್ದಾರೆ. ಹಾಗೆ ಬಂದವರು ತಪ್ಪಾಯ್ತು ಸರ್, ಇನ್ಮುಂದೆ ಹಾಗೆ ಮಾಡಲ್ಲ ಅಂತ ಗೋಗರೆದು ಬಟ್ಟೆ ವಾಪಸ್ಸು ಪಡೆಯುವ ಬದಲು ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಪೊಲೀಸರೇನೋ ಬುದ್ಧಿವಾದ ಹೇಳಿ ಬಟ್ಟೆ ಮರಳಿಸಿದ್ದಾರೆ, ಅದರೆ ನಾಯಿ ಬಾಲ ಯಾವತ್ತಿಗೂ ಡೊಂಕೇ ಎನ್ನುವ ಮಾತಿಗೆ ಸಾಕ್ಷಿಯಾಗಿರುವ ಯುವಕರಿಗೆ ಬುದ್ಧಿಯಂತೂ ಬಂದಿರಲಾರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೈವ ನುಡಿದಂತೆ ಗುಳಿಗ ದೇವರ ಮೂಲ ವಿಗ್ರಹ ಪತ್ತೆ; ಚಾರ್ಮಾಡಿ ಘಾಟಿ ಪ್ರಯಾಣಿಕರನ್ನ ರಕ್ಷಿಸ್ತಿರೋ‌ ದೈವದ ಬಗ್ಗೆ ಹೆಚ್ಚಾಯ್ತು ನಂಬಿಕೆ

Follow us on