ಬೆಂಗಳೂರಿನ ರಾಮೇಶ್ವರಂ ಕೆಫೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್; ಎನ್ಐಎ ತಂಡದಿಂದ ಸ್ಥಳ ಮಹಜರು
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಯುತ್ತಿದೆ. ಆರೋಪಿ ಮುಸಾವಿರ್ನನ್ನು ಕರೆತಂದು ಎನ್ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದಾರೆ. ಭದ್ರತೆಗಾಗಿ ಸ್ಥಳೀಯವಾಗಿ ವೈಟ್ ಫೀಲ್ಡ್ ವಿಭಾಗದ 50ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.
ಬೆಂಗಳೂರು, ಆಗಸ್ಟ್.05: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಮೇಶ್ವರಂ ಕೆಫೆಯಲ್ಲಿ ಎನ್ಐಎ ಅಧಿಕಾರಿಗಳಿಂದ ಸ್ಥಳ ಮಹಜರು ನಡೆಯುತ್ತಿದೆ. ಆರೋಪಿ ಮುಸಾವಿರ್ನನ್ನು ಕರೆತಂದು ಎನ್ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದಾರೆ. ಹೀಗಾಗಿ ರಾಮೇಶ್ವರಂ ಕೆಫೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಸ್ಥಳೀಯವಾಗಿ ವೈಟ್ ಫೀಲ್ಡ್ ವಿಭಾಗದ 50ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಘಟನೆ ನಡೆದು ಐದು ತಿಂಗಳ ಬಳಿಕ ಆರೋಪಿ ಕರೆತಂದು ಮಹಜರು ನಡೆಸಲಾಗುತ್ತಿದೆ.
NIA ಅಧಿಕಾರಿಗಳು 2-3 ಬಾರಿ ದೃಶ್ಯ ಮರು ಸೃಷ್ಟಿ ಮಾಡ್ತಿದ್ದಾರೆ. ಆರೋಪಿ ಮುಸಾವಿರ್, 3 ಬಾರಿ ನಡೆದುಕೊಂಡು ಬಂದು ಯಾವ ರೀತಿ ಕೃತ್ಯ ಎಸಗಲಾಗಿತ್ತು ಎಂದು ತೋರಿಸಿದ್ದಾನೆ. ಕ್ಯಾಪ್, ಕನ್ನಡಕ, ಬ್ಯಾಗ್ ಹಾಕಿಕೊಂಡು ಅವತ್ತು ಹೇಗೆ ಬಂದಿದ್ದ ಅದೇ ರೀತಿ ನಡೆದುಕೊಂಡು ಬಂದು ತೋರಿಸಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾನೆ. ರಾಮೇಶ್ವರಂ ಕೆಫೆಗೆ ಹೇಗೆ ಬಂದಿದ್ದ ಆ ರೀತಿ ದೃಶ್ಯ ಮರುಸೃಷ್ಟಿ ಮಾಡಲಾಗಿದೆ. ಬಾಂಬ್ ಇಟ್ಟಿದ್ದ ಸ್ಥಳ, ಕುಳಿತಿದ್ದ ಸ್ಥಳ ತೋರಿಸಿದ್ದಾನೆ. ಈ ಎಲ್ಲವನ್ನೂ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡ್ತಿದ್ದಾರೆ. ಅವತ್ತಿನ ರೀತಿ ಬ್ಲ್ಯಾಕ್ ಬ್ಯಾಗ್, ಟೋಪಿ ಹಾಕಿಸಿ ಸ್ಥಳ ಮಹಜರು ಮಾಡಲಾಗುತ್ತಿದೆ.
ರಾಷ್ಟ್ರೀಯ ತನಿಖಾ ದಳ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಮಾ.1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಏಪ್ರಿಲ್ 12ರಂದು ಪ್ರಮುಖ ಆರೋಪಿಗಳನ್ನು NIA ಬಂಧಿಸಿತ್ತು. ಅಬ್ದುಲ್ ಮತೀನ್, ಮುಸಾವಿರ್ ಹುಸೇನ್ ಬಂಧತ ಆರೋಪಿಗಳು.
ವರದಿ: ಪ್ರದೀಪ್, ಟಿವಿ9
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

