ಜೀವ ಬೆದರಿಕೆ ಬಗ್ಗೆ ಪೊಲೀಸರಿಗೆ ಹೇಳಿದರೂ ಕ್ರಮ ಜರುಗಿಸುತ್ತಿಲ್ಲ, ತಾರತಮ್ಯ ಧೋರಣೆ ಅರ್ಥವಾಗುತ್ತಿಲ್ಲ: ಶರಣ್ ಪಂಪ್ವೆಲ್, ವಿಹೆಚ್​ಪಿ

Updated on: May 05, 2025 | 4:39 PM

ಹಿಂದೂ ಯುವಕರಿಗೆ, ಹಿಂದೂ ಕಾರ್ಯಕರ್ತರಿಗೆ ಎಷ್ಟೇ ಬೆದರಿಕೆ ಕರೆಗಳು ಬಂದರೂ ಪೊಲೀಸರು ಕಾರ್ಯಪ್ರವೃತ್ತರಾಗುತ್ತಿಲ್ಲ, ಸುಹಾಸ ಶೆಟ್ಟಿಗೂ ಒಂದು ತಿಂಗಳು ಹಿಂದೆ ಬೆದರಿಕೆ ಕರೆ ಬಂದಿತ್ತು, ಅದರೆ ಪೊಲೀಸರು ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ, ಅವರು ಎಚ್ಚೆತ್ತುಕೊಂಡು ರಕ್ಷಣೆ ನೀಡಿದ್ದರೆ ಪ್ರಾಯಶಃ ಅವನ ಜೀವ ಹೋಗುತ್ತಿರಲಿಲ್ಲ ಎಂದು ಶರಣ್ ಪಂಪ್ವೆಲ್ ಹೇಳಿದರು.

ಮಂಗಳೂರು, ಮೇ 5: ತನಗೆ ಜೀವ ಬೆದರಿಕೆ ಕರೆಗಳು ಹದಿನಾರು ವರ್ಷದಿಂದ ಬರುತ್ತಿವೆ, ಅತ್ಮರಕ್ಷಣೆಗಾಗಿ ಗನ್ ಲೈಸನ್ಸ್​ ಕೊಡಿ ಅಂತ ಹತ್ತಾರು ಸಲ ಪೊಲೀಸರಿಗೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ, ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪೋಸ್ಟ್ ಹರಿದಾಡುವಾಗ ಸುಮೋಟು ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿ ಅಂತ ಪೊಲೀಸರಿಗೆ ವಿನಂತಿಸಿಕೊಂಡರೂ ಅವರು ಅದನ್ನು ಮಾಡುತ್ತಿಲ್ಲ ಎಂದು ದಕ್ಷಿಣ ಕನ್ನಡದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ (Sharan Pumpwell) ಹೇಳಿದರು. ಹಿಂದೂ ಯುವಕರು ಆತ್ಮರಕ್ಷಣೆಗೆ ವಾಹನಗಳಲ್ಲಿ ಆಯುಧಗಳನ್ನು ಇಟ್ಕೊಂಡು ತಿರುಗಿದರೆ ಪೊಲೀಸರು ಕೂಡಲೇ ಕೇಸ್ ದಾಖಲಿಸುತ್ತಾರೆ, ಅದರೆ ಮುಸಲ್ಮಾನರು ಭಾರೀ ಸಂಖ್ಯೆಯಲ್ಲಿ ಆಯುಧಗಳನ್ನು ವಾಹನಗಳಲ್ಲಿ ಹೊತ್ತು ತಿರುಗಿದರೂ ಪೊಲೀಸರು ಪ್ರಶ್ನಿಸುವುದಿಲ್ಲ, ಪೊಲೀಸರಿಂದ ಯಾಕೆ ತಾರತಮ್ಯ ಧೋರಣೆ ಅಂತ ಅರ್ಥವಾಗುತ್ತಿಲ್ಲ, ಅವರ ನಿರ್ಲಕ್ಷತನಕ್ಕೆ ಸರ್ಕಾರದ ಒತ್ತಡ ಇರಬಹುದೇ ಎಂಬ ಶಂಕೆ ಮೂಡುತ್ತದೆ ಎಂದು ಶರಣ್ ಹೇಳಿದರು.

ಇದನ್ನೂ ಓದಿ:  ಸುಹಾಸ್ ಶೆಟ್ಟಿ ಕೊಲೆಗೆ ವಿದೇಶದಿಂದ ಹಣ ಸಂದಾಯವಾಗಿರುವ ಶಂಕೆ: ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾದ ಮಂಗಳೂರು ಪೊಲೀಸರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ