ಸ್ಯಾಂಟ್ರೋ ರವಿ ತನ್ನ ಮೊಬೈಲ್ ಸ್ವಿಚ್ಚಾಫ್ ಮಾಡಿಕೊಂಡಿರುವುದರಿಂದ ಹುಡುಕುವುದು ಕಷ್ಟವಾಗುತ್ತಿದೆ: ಅಲೋಕ್ ಕುಮಾರ್ (ಎಡಿಜಿಪಿ)

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 10, 2023 | 5:18 PM

ತಂತ್ರಜ್ಞಾನ ಮುಂದುವರಿದರೂ ಮೊಬೈಲ್ ಸ್ವಿಚ್ಚಾಫ್ ಮಾಡಿಕೊಂಡರೆ ಟ್ರೇಸ್ ಮಾಡುವುದು ಕಷ್ಟವಾಗುತ್ತದೆ ಎಂದು ಪೊಲೀಸ್ ಆಧಿಕಾರಿ ಹೇಳಿದರು.

ಮೈಸೂರು: ದಿನಗಳೆದಂತೆ ಸ್ಯಾಂಟ್ರೋ ರವಿ (Santro Ravi) ಪೊಲಿಸರಿಗೆ ಸವಾಲಾಗುತ್ತಿದ್ದಾನೆ. ಅವನ ಪತ್ನಿ ದೂರು ಸಲ್ಲಿಸಿದ ಬಳಿಕ ಪ್ರಕರಣ ದಾಖಲಾಗಿ ಒಂದ ವಾರ ಮೇಲಾಗಿದೆ ಮತ್ತು ಪೊಲೀಸರು ಬೆಂಗಳೂರು, ಮಂಡ್ಯ, ಮೈಸೂರು (Mysuru) ಮತ್ತು ರಾಮನಗರ ಜಿಲ್ಲೆಗಳಲ್ಲಿ ಹುಡುಕಾಡುತ್ತಿದ್ದಾರೆ. ಆದರೆ ರವಿ ಮಾತ್ರ ಅವರ ಕೈಗೆ ಸಿಗುತ್ತಿಲ್ಲ. ಮೈಸೂರಿಗೆ ಇಂದು ಭೇಟಿ ನೀಡಿದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ (Alok Kumar) ಅದೇ ಮಾತನ್ನು ಹೇಳಿದರು. ತಂತ್ರಜ್ಞಾನ ಮುಂದುವರಿದರೂ ಮೊಬೈಲ್ ಸ್ವಿಚ್ಚಾಫ್ ಮಾಡಿಕೊಂಡರೆ ಟ್ರೇಸ್ ಮಾಡುವುದು ಕಷ್ಟವಾಗುತ್ತದೆ ಎಂದು ಪೊಲೀಸ್ ಆಧಿಕಾರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ