ಬೆಂಗಳೂರು: ಸಿದ್ದರಾಮಯ್ಯನವರು (Siddaramaiah) ವಿಧಾನಸಭಾ ಚುನಾವಣೆಗೆ ಪ್ರಚಾರ ಕಾರ್ಯ ಈಗಾಗಲೇ ಅರಂಭಿಸಿದ್ದಾರೆ. ಅವರ ಆಪ್ತ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪ್ರತಿನಿಧಿಸುವ ಚಾಮರಾಜಪೇಟೆಯಲ್ಲಿ (Chamarajapet) ಅವರು ಸುತ್ತುಗಳನ್ನು ಹಾಕಿ ಹಲವಾರು ಮನೆಗಳಿಗೆ ಭೇಟಿ ನೀಡಿದರು. ಅದೇ ಸಂದರ್ಭದಲ್ಲಿ ಇತ್ತೀಚಿಗೆ ಮದುವೆಯಾದ ಮನೆಯೊಂದಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ನವವಿವಾಹಿತರನ್ನು ಹರಸಿ ಆಶೀರ್ವದಿಸಿದರು. ಮದುಮಗಳು ನೀಡಿದ ಸಿಹಿತಿಂಡಿಯನ್ನು ಅಕ್ಕರೆಯಿಂದ ತಿಂದರು. ಅವರ ಸಮ್ಮುಖದಲ್ಲಿ ಇಂದು ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳ ಮಾಜಿ ಕಾರ್ಪೊರೇಟರ್ ಗಳು ಕಾಂಗ್ರೆಸ್ ಪಕ್ಷ ಸೇರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ