ಬೆಂಗಳೂರು ಗ್ರಾಮಾಂತರ, ಸೆ.22: ದೇಶದೆಲ್ಲೆಡೆ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದರಂತೆ ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನೆಯನ್ನು ಮಾಡಲಾಗುತ್ತಿದೆ. ಇದೀಗ ದೊಡ್ಡಬಳ್ಳಾಪುರ ಗ್ರಾಮಾಂತರ(Doddaballapura Rural) ಪೋಲೀಸರು ಗಣೇಶನ ವಿಸರ್ಜನೆ ವೇಳೆ ಠಾಣೆಯ ಮುಂದೆಯೇ ಟಪ್ಪಾಗುಚ್ಚಿ ಸ್ಟೆಪ್ ಹಾಕುವ ಮೂಲಕ ಕುಣಿದು ಕುಪ್ಪಳಿಸಿದ್ದಾರೆ. ಹೌದು, ಠಾಣೆಯಲ್ಲಿಟ್ಟಿದ್ದ ಗಣೇಶಮೂರ್ತಿ ವಿಸರ್ಜನೆ ಮಾಡುವ ವೇಳೆ ಠಾಣೆಯ ಆವರಣದಲ್ಲಿಯೇ ಪೊಲೀಸರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಘಟನೆ ನಡೆದಿದ್ದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ