ಬ್ಯಾಡಗಿಯಲ್ಲಿ ಮೆಣಸಿನಕಾಯಿ ಬೆಲೆ ಕುಸಿತಕ್ಕೆ ಕಾರಣರಾದವರನ್ನು ಮೊದಲು ಪತ್ತೆ ಮಾಡಬೇಕಿದೆ: ಜಿ ಪರಮೇಶ್ವರ್
ಮೆಣಸಿನಕಾಯಿ ಬೆಲೆ ಪ್ರತಿಕ್ವಿಂಟಾಲ್ ಗೆ ರೂ. 20,000 ದಿಂದ ರೂ, 8,000 ಗಳಿಗೆ ಕುಸಿದ ಕಾರಣ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಲೆ ಕುಸಿತಕ್ಕೆ ಕಾರಣವೇನು, ಯಾರು ಮಾಡಿದ್ದು ಅಂತ ಪತ್ತೆ ಮಾಡಿ ಅಂತ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ ಎಂದು ಗೃಹ ಸಚಿವ ಹೇಳಿದರು.
ಬೆಂಗಳೂರು: ಮೆಣಸಿನಕಾಯಿ ಬೆಲೆ ದಿಢೀರ್ ಪಾತಾಳಕ್ಕೆ ಕುಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ವ್ಯವಸಾಯ ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆಯಲ್ಲಿ (Bydagi APMC) ನಡೆದ ದೊಂಬಿ ಮತ್ತು ವಾಹನಗಳಿಗೆ ಬೆಂಕಿಯಿಟ್ಟ ಘಟನೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಹೇಳಿಕೆ ನೀಡಿದ್ದಾರೆ. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಮೆಣಸಿನಕಾಯಿ ಬೆಲೆ (chilly price) ಪ್ರತಿಕ್ವಿಂಟಾಲ್ ಗೆ ರೂ. 20,000 ದಿಂದ ರೂ, 8,000 ಗಳಿಗೆ ಕುಸಿದ ಕಾರಣ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಲೆ ಕುಸಿತಕ್ಕೆ ಕಾರಣವೇನು, ಯಾರು ಮಾಡಿದ್ದು ಅಂತ ಪತ್ತೆ ಮಾಡಿ ಅಂತ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆ ಏಷ್ಯಾದ್ಲಲೇ ಅತಿ ದೊಡ್ಡದು, ಘಟನೆಯಲ್ಲಿ 6-7 ವಾಹನಗಳು ಸುಟ್ಟು ಭಸ್ಮವಾಗಿವೆ ಮತ್ತು ಒಂದು ಫೈರ್ ಎಂಜಿನ್ ಗೂ ಬೆಂಕಿ ತಗುಲಿದೆ ಎಂದು ಪರಮೇಶ್ವರ್ ಹೇಳಿದರು. ಬೆಲೆ ಕುಸಿತಕ್ಕೆ ಕಾರಣ ಯಾರು ಅನ್ನೋದು ಮೊದಲು ಪತ್ತೆಯಾಗಬೇಕಿದೆ, ಗಲಾಟೆ-ದಳ್ಳುರಿಗೆ ಸಂಬಂಧಿಸಿದಂತೆ 40-45 ಜನರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭೀಕರ ಬರದಲ್ಲೂ ಮೆಣಸಿನಕಾಯಿ ಬೆಳೆದು ಸೈ ಎನಿಸಿಕೊಂಡ ರೈತರು; ಇಲ್ಲಿದೆ ಸಂಪೂರ್ಣ ವಿವರ