Water Crisis: ಖಾಲಿ ಕೊಡ ಹಿಡಿದು ಬೀದಿಗಿಳಿದು ಬಿಜೆಪಿ ಪ್ರತಿಭಟನೆ, ಸರ್ಕಾರದ ವಿರುದ್ಧ ಕಿಡಿ
ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹನಿ ನೀರಿಗೂ ಪರದಾಡುವಂತಹ ಸ್ಥಿತಿ ಇದೆ, ಹೀಗಾಗಿ ಬಿಜೆಪಿ ಖಾಲಿ ಕೊಡಗಳನ್ನು ಹಿಡಿದು ರಸ್ತೆಗೆ ಇಳಿದಿದೆ. ಸರ್ಕಾರ ಸಮರ್ಪಕವಾಗಿ ಬರಗಾಲ ನಿರ್ವಹಣೆ ಮಾಡುತ್ತಿಲ್ಲ ಅಂತ ಆರೋಪಿಸಿ ಪ್ರತಿಭಟನೆ ನಡೆಸುತ್ತಿದೆ. ಭಜನೆ ಮಾಡ್ತಾನೆ ಸರ್ಕಾರದ ವಿರುದ್ಧ ಕಾರ್ಯಕರ್ತರು ಆಕ್ರೋಶ.
ಬೆಂಗಳೂರು, ಮಾರ್ಚ್.12: ನಗರದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಹೀಗಾಗಿ ಕಾಲಿ ಕೊಡ ಹಿಡಿದು ಬಿಜೆಪಿ ಪ್ರತಿಭಟನೆ ನಡೆಸಿದೆ. ಸರ್ಕಾರ ಸಮರ್ಪಕವಾಗಿ ಬರಗಾಲ ನಿರ್ವಹಣೆ ಮಾಡುತ್ತಿಲ್ಲ ಅಂತ ಆರೋಪಿಸಿ ಬೆಂಗಳೂರು ನಗರ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕುದುರೆಗಾಡಿಯ ಮೇಲೆ ಖಾಲಿ ಟ್ಯಾಂಕ್ ಇಟ್ಟು, ಖಾಲಿ ಬಿಂದಿಗೆಗಳನ್ನ ಹಿಡಿದು ಸರ್ಕಾರದ ವಿರುದ್ಧ ಭಜನೆ ಮಾಡುವುದರ ಮೂಲಕ ಬಿಜೆಪಿ ನಾಯಕರು ಪ್ರತಿಭಟಿಸಿದರು. ನೀರಿಲ್ಲಾ, ನೀರಿಲ್ಲಾ ಎಂದು ಭಜನೆ ಮಾಡ್ತಾನೆ ಸರ್ಕಾರದ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ನಗರ ಘಟಕ ಅಧ್ಯಕ್ಷ ಹರೀಶ್, ಸಪ್ತಗಿರಿಗೌಡ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos