Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಮತ್ತೇ ನಾವು ಬರ್ತೀವಿ, ನಾನೇ ಮುಖ್ಯಮಂತ್ರಿ ಆಗ್ತೀನಿ! ಬಸನಗೌಡ ಪಾಟೀಲ್ ಯತ್ನಾಳ್

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದೇ ಯತ್ನಾಳ್ ಡಿಸೆಂಬರ್ ಒಳಗೆ ಸರ್ಕಾರ ಉರುಳಿ ಹೋಗುತ್ತದೆ ಅಂತ ಹೋದಲೆಲ್ಲೆಡೆ ಹೇಳುತ್ತಿದ್ದರು. ಡಿಸೆಂಬರ್ ಕಳೆಯಿತು, ಯತ್ನಾಳ್ ತಮ್ಮ ಹೇಳಿಕೆಯ ಅವಧಿಯನ್ನು ಲೋಕಸಭಾ ಚುನಾವಣೆಗೆ ವಿಸ್ತರಿಸಿದರು! ಈಗ ಸಿದ್ದರಾಮಯ್ಯ ಸರ್ಕಾರ ಉರುಳುವುದರ ಜೊತೆಗೆ ತಾನೇ ಮುಖ್ಯಮಂತ್ರಿ ಆಗುತ್ತೇನೆ ಅನ್ನುತ್ತಾರೆ.

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Mar 12, 2024 | 11:03 AM

ಯಾದಗಿರಿ: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda patil Yatnal) ನಿನ್ನೆ ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡುವಾಗ ತಮ್ಮ ಎಂದಿನ ಮಾತಿನ ವರಸೆ ಮುದುವರಿಸಿದರು. ಜನರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸುವುದು ಅವರಿಗೆ ಬಹಳ ಇಷ್ಟ. ಹಾಗಾಗೇ, ಭಾಷಣಗಳನ್ನು ಮಾಡುವಾಗ ಅತಿಶಯೋಕ್ತಿಗಳನ್ನು (hyperbole) ಬಳಸುತ್ತಾರೆ. ಇಲ್ಲಿ ಅವರು ಮಾತಾಡುವುದನ್ನು ಕೇಳಿ. ನರೇಂದ್ರ ಮೋದಿಯವರು (PM Narendra Modi) ಬರ್ತಾರಾ ಮತ್ತೇ ಪ್ರಧಾನಿ ಆಗ್ತಾರಾ ಅನ್ನುತ್ತಾರೆ. ಅವರು ಹಾಗೆ ಹೇಳುತ್ತಿದ್ದ ಹಾಗೆಯೇ ಜನ ಮೋದಿ ಮೋದಿ ಅಂತ ಒಕ್ಕೊರಲಿಂದ ಕೂಗುತ್ತಾರೆ. ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಅಂತ ಹೇಳುತ್ತಿವೆ ಮತ್ತು ಅದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಯತ್ನಾಳ್ ಅಡುವ ಮುಂದಿನ ಮಾತು ಕೇಳಿ.ಕರ್ನಾಟದಲ್ಲಿ ನಾವು ಬರ್ತೀವಿ, ನಾನೇ ಮುಖ್ಯಮಂತ್ರಿ ಆಗ್ತೀನಿ, ಡಿಕೆ ಶಿವಕುಮಾರ್ ಗೆ ಏಯ್ ಹೋಗೋ ಅಂತೀನಿ ಅನ್ನುತ್ತಾರೆ!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದೇ ಯತ್ನಾಳ್ ಡಿಸೆಂಬರ್ ಒಳಗೆ ಸರ್ಕಾರ ಉರುಳಿ ಹೋಗುತ್ತದೆ ಅಂತ ಹೋದಲೆಲ್ಲೆಡೆ ಹೇಳುತ್ತಿದ್ದರು. ಡಿಸೆಂಬರ್ ಕಳೆಯಿತು, ಯತ್ನಾಳ್ ತಮ್ಮ ಹೇಳಿಕೆಯ ಅವಧಿಯನ್ನು ಲೋಕಸಭಾ ಚುನಾವಣೆಗೆ ವಿಸ್ತರಿಸಿದರು! ಈಗ ಸಿದ್ದರಾಮಯ್ಯ ಸರ್ಕಾರ ಉರುಳುವುದರ ಜೊತೆಗೆ ತಾನೇ ಮುಖ್ಯಮಂತ್ರಿ ಆಗುತ್ತೇನೆ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾಸೀರ್ ಹುಸ್ಸೇನ್​ನಂಥ ದೇಶದ್ರೋಹಿಗಳನ್ನೇ ಕಾಂಗ್ರೆಸ್ ಪರಿಷತ್ ಮತ್ತು ರಾಜ್ಯಸಭೆಗೆ ಆಯ್ಕೆ ಮಾಡುತ್ತದೆ: ಬಸನಗೌಡ ಪಾಟೀಲ್ ಯತ್ನಾಳ್