AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ಗಿಟ್ಟಿಸುವ ಭರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರಾ ಸಿಪಿ ಯೋಗೇಶ್ವರ್?

ಟಿಕೆಟ್ ಗಿಟ್ಟಿಸುವ ಭರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರಾ ಸಿಪಿ ಯೋಗೇಶ್ವರ್?

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 16, 2024 | 5:51 PM

ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಸೀಜ್ ಮಾಡಿದ ಅಡುಗೆ ಯಾರ ಪಾಲಾಗುತ್ತದೆ ಅನ್ನೋದೇ ದೊಡ್ಡ ಪ್ರಶ್ನೆ. ಇದು 150 ಜನರಿಗಾಗಿ ಮಾಡಿದ ಅಡುಗೆ. ಚಿಕನ್ ಕಬಾಬ್, ಮಟನ್ ಕರಿ, ಮಟನ್ ಸುಕ್ಕಾ ಮತ್ತು ಅನ್ನ ಇದೆ. ಬಾಡೂಟವನ್ನು ಬಿಸಾಡಲಂತೂ ಬಾರದು, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗುತ್ತದೆಯೇ?

ರಾಮನಗರ: ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎನ್​ಡಿಎ ಅಭ್ಯರ್ಥಿಯಾಗಿ ಟಿಕೆಟ್ ಪಡೆದೇ ತೀರುವ ಪಣತೊಟ್ಟಿರುವ ಸಿಪಿ ಯೋಗೇಶ್ವರ್ ಗೆ ಇದು ಗೊತ್ತಿರಲಿಲ್ಲವೇ? ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕವೂ ಅವರು ಸುಮಾರು 150 ಕಾರ್ಯಕರ್ತರನ್ನು ಒಗ್ಗೂಡಿಸಿ ಅವರಿಗಾಗಿ ಮಾಂಸದೂಟದ ಔತಣವನ್ನು ಯಾಕೆ ಏರ್ಪಾಟು ಮಾಡಿದರೋ? ಖಚಿತ ಸುಳಿವಿನ ಮೇರೆಗೆ ಚನ್ನಪಟ್ಟಣದ ಹೊರವಲಯದಲ್ಲಿರುವ ಹೋಮ್ ಸ್ಟೇ ಒಂದರ ಮೇಲೆ ದಾಳಿ ನಡೆಸಿದ ರಾಮನಗರ ಚುನಾವಣಾಧಿಕಾರಿ ಮತ್ತು ಪೊಲೀಸರು ಅಡುಗೆ ಮತ್ತು ಅಡುಗೆ ಸಾಮಾನುಗಳನ್ನು ಸೀಜ್ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ? ಬಿಜೆಪಿಯ ಒಲವು ಸಿಪಿ ಯೋಗೇಶ್ವರ್ ಮೇಲೆ!