Prabhu Deva: ‘ಪುನೀತ್ ದೇವರಾಗಿ ಕಂಡಾಗ ಎಮೋಷನಲ್ ಆದೆ’; ವೇದಿಕೆ ‘ಪವರ್ ಸ್ಟಾರ್’ ಸ್ಮರಿಸಿದ ಪ್ರಭುದೇವ
Lucky Man Audio Release: ‘ಲಕ್ಕಿ ಮ್ಯಾನ್’ ಚಿತ್ರ ಸೆಪ್ಟೆಂಬರ್ 9ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ಪ್ರಭುದೇವ ಅವರು ಒಂದು ವಿಶೇಷ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಖ್ಯಾತ ನಟ, ಡ್ಯಾನ್ಸರ್, ನಿರ್ದೇಶಕ ಪ್ರಭುದೇವ ಅವರು ಕನ್ನಡ ಚಿತ್ರರಂಗದ ಜೊತೆ ಮೊದಲಿನಿಂದಲೂ ನಂಟು ಹೊಂದಿದ್ದಾರೆ. ಈಗ ಅವರ ಸಹೋದರ ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ‘ಲಕ್ಕಿ ಮ್ಯಾನ್’ (Lucky Man) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 9ರಂದು ರಿಲೀಸ್ ಆಗಲಿರುವ ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ (Puneeth Rajkumar) ಜೊತೆ ಒಂದು ವಿಶೇಷ ಹಾಡಿನಲ್ಲಿ ಪ್ರಭುದೇವ ಕೂಡ ಡ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ಅವರು ದೇವರ ಪಾತ್ರ ಮಾಡಿದ್ದಾರೆ. ಆ ಗೆಟಪ್ನಲ್ಲಿ ಅವರನ್ನು ಕಂಡಾಗ ಪ್ರಭುದೇವ (Prabhu Deva) ಎಮೋಷನಲ್ ಆಗಿದ್ದಾರೆ. ‘ಲಕ್ಕಿ ಮ್ಯಾನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ಅವರಾಡಿದ ಮಾತುಗಳು ಈ ವಿಡಿಯೋದಲ್ಲಿದೆ.
Latest Videos