ಒರಾಯನ್ ಮಾಲ್​ನಲ್ಲಿ ಡೊಳ್ಳು ಸಿನಿಮಾ ನೋಡಲು ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ  ಸಿದ್ದರಾಮಯ್ಯ ಬೆಂಗಳೂರಿನ ಒರಾಯನ್ ಮಾಲ್​ನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡೊಳ್ಳು ಸಿನಿಮಾ ನೋಡಲು ಹೋಗಿದ್ದಾರೆ.

TV9kannada Web Team

| Edited By: Vivek Biradar

Aug 23, 2022 | 8:06 PM

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬೆಂಗಳೂರಿನ (Bengaluru) ಒರಾಯನ್ ಮಾಲ್​ನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡೊಳ್ಳು ಸಿನಿಮಾ (Dollu Film) ನೋಡಲು ಹೋಗಿದ್ದಾರೆ. ಕರುನಾಡಿನ ಜನಪದ ಕಲೆ ಡೊಳ್ಳು ಮತ್ತು ಅದರ ಮಹತ್ವವನ್ನು ಸಾರುವ ಈ ಸಿನಿಮಾಗೆ ಈವರೆಗೆ 18 ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮನ್ನಣೆ ದೊರೆತಿದೆ ಎಂಬುದು ವಿಶೇಷ. ಅಲ್ಲದೇ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಭಾಜನವಾಗಿದೆ. ಕಮರ್ಷಿಯಲ್ ಸಿನಿಮಾಗಳ ನಡುವೆ ಇಂತಹ ವಿಭಿನ್ನ ಕಥಾವಸ್ತು ಇರುವ ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿದ್ದಾರೆ.

Follow us on

Click on your DTH Provider to Add TV9 Kannada