ಅಮ್ಮ ಮಂಗ-ಮಗು ನಾಯಿಮರಿ; ಬಲು ಅಪರೂಪದ ಜೋಡಿಯಿದು!

ಅಮ್ಮ ಮಂಗ-ಮಗು ನಾಯಿಮರಿ; ಬಲು ಅಪರೂಪದ ಜೋಡಿಯಿದು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2022 | 6:51 PM

ಎರಡು ಭಿನ್ನ ಪ್ರಬೇಧದ ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಂಡು ಜನ ದಂಗಾಗಿದ್ದಾರೆ ಮತ್ತು ಅಷ್ಟೇ ಸಂತೋಷ ಕೂಡ ಪಡುತ್ತಿದ್ದಾರೆ. ನಾಯಿಮರಿಯನ್ನು ಮಾಳಿಗೆ ಮೇಲೆ ಕೋತಿ ಎತ್ತಿಕೊಂಡು ಹೋಗಿ ಹಾಲುಣಿಸುತ್ತಿರುವ ದೃಶ್ಯ ಹೃದಯಸ್ಪರ್ಶಿಯಾಗಿದೆ.

ಗದಗ: ಬಹಳ ಅಪರೂಪದ ತಾಯಿ ಮಗುವಿನ ಜೋಡಿಯಿದು ಮಾರಾಯ್ರೇ. ಗದಗ (Gadag) ನಗರದ ವಿವೇಕಾನಂದ ಬಡಾವಣೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಕೋತಿಯೊಂದು (monkey) ಒಂದು ನಾಯಿಮರಿಯನ್ನು (puppy) ತಾನೇ ಹೆತ್ತ ಮಗುವೇನೋ ಎಂಬಂತೆ ಆರೈಕೆ ಮಾಡುತ್ತಿದೆ. ಕಳೆದರೆಡು ದಿನಗಳಿಂದ ಬಡಾವಣೆಯಲ್ಲಿ ಎರಡು ಭಿನ್ನ ಪ್ರಬೇಧದ ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಂಡು ಜನ ದಂಗಾಗಿದ್ದಾರೆ ಮತ್ತು ಅಷ್ಟೇ ಸಂತೋಷ ಕೂಡ ಪಡುತ್ತಿದ್ದಾರೆ. ನಾಯಿಮರಿಯನ್ನು ಮಾಳಿಗೆ ಮೇಲೆ ಕೋತಿ ಎತ್ತಿಕೊಂಡು ಹೋಗಿ ಹಾಲುಣಿಸುತ್ತಿರುವ ದೃಶ್ಯ ಹೃದಯಸ್ಪರ್ಶಿಯಾಗಿದೆ.