Pradeep Eshwar: ಶಾಸಕ ಪ್ರದೀಪ್ ಈಶ್ವರ್ ಆರಾಧ್ಯ ದೈವ ಗ್ರಾಮಕ್ಕೆ ಬಸ್ ವ್ಯವಸ್ಥೆ

| Updated By: ಆಯೇಷಾ ಬಾನು

Updated on: Jul 24, 2023 | 1:42 PM

ಹಲವು ದಿನಗಳಿಂದ ದೇವನಹಳ್ಳಿಯಿಂದ ಕೆಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಅದರಲ್ಲೂ ಪ್ರದೀಪ್ ಈಶ್ವರ್ ನಂಬಿಕೆ ದೇವರು ಗಡ್ಡದನಾಯಕನಹಳ್ಳಿ ದುರ್ಗಾ ಪರಮೇಶ್ವರಿ ದೇವಾಲಯದ ಊರಿಗೆ ಬಸ್ ಇರಲಿಲ್ಲ. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ಈ ಬಗ್ಗೆ ಸಚಿವರ ಗಮನ ಸೆಳೆದಿದ್ದರು.

ದೇವನಗಹಳ್ಳಿ, ಜುಲೈ 23: ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಜನರಿಗೆ ಶಾಸಕ ಪ್ರದೀಪ್ ಈಶ್ವರ್ ಸಂತಸದ ಸುದ್ದಿ ಹಂಚಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ದೇವನಹಳ್ಳಿಯಿಂದ ಗಡ್ಡದನಾಯಕನಹಳ್ಳಿ ಗ್ರಾಮಕ್ಕೆ ಕೆಎಸ್​ಆರ್​ಟಿಸಿ ಬಸ್ ಸೇವೆ ಆರಂಭವಾಗಿದೆ. ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಶಾಸಕ ಪ್ರದೀಪ್ ಈಶ್ವರ್ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ರು.

ಹಲವು ದಿನಗಳಿಂದ ದೇವನಹಳ್ಳಿಯಿಂದ ಕೆಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಅದರಲ್ಲೂ ಪ್ರದೀಪ್ ಈಶ್ವರ್ ನಂಬಿಕೆ ದೇವರು ಗಡ್ಡದನಾಯಕನಹಳ್ಳಿ ದುರ್ಗಾ ಪರಮೇಶ್ವರಿ ದೇವಾಲಯದ ಊರಿಗೆ ಬಸ್ ಇರಲಿಲ್ಲ. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ಈ ಬಗ್ಗೆ ಸಚಿವರ ಗಮನ ಸೆಳೆದಿದ್ದರು. ಈ ಹಿನ್ನಲೆ ಇಂದಿನಿಂದ ದೇವನಹಳ್ಳಿ ಯಿಂದ ಯಲಿಯೂರು, ದೊಡ್ಡತತ್ತಮಂಗಲ, ಗಡ್ಡದನಾಯಕನಹಳ್ಳಿ ವಿಜಯಪುರ ಮಾರ್ಗವಾಗಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ.

Published on: Jul 24, 2023 01:33 PM