Loading video

‘ರೇವಣ್ಣನ ನಡವಳಿಕೆ ಸರಿಯಿಲ್ಲ ಇಂಗ್ಲೆಂಡ್​ನಲ್ಲೂ ಒಂದ್ಸಲ ಸಿಕ್ಕಿಬಿದ್ದಿದ್ರು’: ಎಲ್.ಆರ್ ಶಿವರಾಮೇಗೌಡ

|

Updated on: May 04, 2024 | 11:51 AM

"ರೇವಣ್ಣ ಅಂತಹ ಒಳ್ಳೆಯ ನಡವಳಿಕೆ ವ್ಯಕ್ತಿಯಲ್ಲ, ನಾನು ರೇವಣ್ಣ ಇಂಗ್ಲೆಂಡ್​​​ಗೆ ಹೋಗಿದ್ದಾಗ ಅಲ್ಲಿ ರೇವಣ್ಣ ಸಿಕ್ಕಿಹಾಕಿಕೊಂಡಿದ್ರು. ಹಾಸನದಲ್ಲಿ ನಡೆದಂತಹ ಘಟನೆಯೇ ಅಂದು ಇಂಗ್ಲೆಂಡ್​ನಲ್ಲೂ ನಡೆದಿತ್ತು" ಎಂದು ಪೆನ್ ಡ್ರೈ ಪ್ರಕರಣದ ಸುದ್ದಿಗೋಷ್ಠಿಯಲ್ಲಿ ಶಿವರಾಮೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಲ್ಲಿದೆ. ಈ ಸಂಬಂಧ ಎಸ್​ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಸಂತ್ರಸ್ತೆಯರಿಂದ ಮಾಹಿತಿ ಕಲೆಹಾಕುವ ಕಾರ್ಯ ನಡೆಸುತ್ತಿದ್ದಾರೆ. ಇದೀಗ ಜೆಡಿಎಸ್​ನ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಸ್ಪೋಟಕ ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಪೆನ್ ಡ್ರೈ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಲ್.ಆರ್ ಶಿವರಾಮೇಗೌಡ “ಮಗ ಇಂತಹ ಹೀನಾ ಕೃತ್ಯ ನಡೆಸುವಾಗ ಅವರ ಅಪ್ಪ ಅಮ್ಮ ಕತ್ತೆ ಕಾಯ್ತಿದ್ರಾ?” ಎಂದು ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಇದಲ್ಲದೇ ” ರೇವಣ್ಣ ಅಂತಹ ಒಳ್ಳೆಯ ನಡವಳಿಕೆ ವ್ಯಕ್ತಿಯಲ್ಲ, ನಾನು ರೇವಣ್ಣ ಇಂಗ್ಲೆಂಡ್​​​ಗೆ ಹೋಗಿದ್ದಾಗ ಅಲ್ಲಿ ರೇವಣ್ಣ ಸಿಕ್ಕಿಹಾಕಿಕೊಂಡಿದ್ರು. ಹಾಸನದಲ್ಲಿ ನಡೆದಂತಹ ಘಟನೆಯೇ ಅಂದು ಇಂಗ್ಲೆಂಡ್​ನಲ್ಲೂ ನಡೆದಿತ್ತು” ಎಂದು ಶಿವರಾಮೇಗೌಡ ಹೇಳಿದ್ದಾರೆ. ಸದ್ಯ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಜೆಡಿಎಸ್​ ಶಾಸಕ ಎಚ್​ಡಿ ರೇವಣ್ಣ ಅವರು ಜಾಮೀನು(Bail) ಕೋರಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್​ಗಳನ್ನು ಡಿಕೆ ಶಿವಕುಮಾರ್ 2 ತಿಂಗಳು ತಮ್ಮ ಬಳಿ ಇಟ್ಟುಕೊಂಡಿದ್ದು ಯಾಕೆ? ಬಿವೈ ವಿಜಯೇಂದ್ರ

Published on: May 04, 2024 11:50 AM