ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್ಗಳನ್ನು ಡಿಕೆ ಶಿವಕುಮಾರ್ 2 ತಿಂಗಳು ತಮ್ಮ ಬಳಿ ಇಟ್ಟುಕೊಂಡಿದ್ದು ಯಾಕೆ? ಬಿವೈ ವಿಜಯೇಂದ್ರ
ಪ್ರಜ್ವಲ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರು ಪೆನ್ ಡ್ರೈವ್ ಗಳನ್ನು 2 ತಿಂಗಳು ಕಾಲ ತಮ್ಮಲ್ಲಿ ಇಟ್ಟುಕೊಂಡು ಮತದಾನ ನಡೆಯುವ ಕೆಲದಿನ ಮುಂಚೆ ಜನರಿಗೆ ತಲುಪಿಸಿದ್ದು ಗುಟ್ಟಾಗೇನೂ ಉಳಿದಿಲ್ಲ, ಪೆನ್ ಡ್ರೈವ್ ಗಳು ಅವರ ಬಳಿಯಲ್ಲೇ ಇದ್ದ ಸಂಗತಿಯನ್ನು ತಾನು ಹೇಳುತ್ತಿಲ್ಲ, ಅದರೆ ಕೆಲ ಕಾಂಗ್ರೆಸ್ ನಾಯಕರ ಹಾಗೆ ಮಾತಾಡಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು
ಯಾದಗಿರಿ: ಬಿಸಲಿಲು ನಾಡು ಯಾದಗಿರಯಲ್ಲಿ ಇಂದು ಚುನಾವಣಾ ರ್ಯಾಲಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) , ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ರಾಹುಲ್ ಗಾಂಧಿ (Rahul Gandhi) ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದರು. ಇಂಥ ಹೇಳಿಕೆ ಗಳಿಂದ ಜನರನ್ನು ದಾರಿ ತಪ್ಪಿಸಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಅವರು ಇದ್ದಾರೆ, ಆದರೆ ರಾಜ್ಯದ ಜನ ಪ್ರಜ್ಞಾವಂತರು, ಅವರೆಲ್ಲ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುತ್ತಿದ್ದಾರೆ ಹಾಗಾಗಿ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಕಸರತ್ತೆಲ್ಲ ವ್ಯರ್ಥ ಎಂದು ವಿಜಯೇಂದ್ರ ಹೇಳಿದರು. ಪ್ರಜ್ವಲ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರು ಪೆನ್ ಡ್ರೈವ್ ಗಳನ್ನು 2 ತಿಂಗಳು ಕಾಲ ತಮ್ಮಲ್ಲಿ ಇಟ್ಟುಕೊಂಡು ಮತದಾನ ನಡೆಯುವ ಕೆಲದಿನ ಮುಂಚೆ ಜನರಿಗೆ ತಲುಪಿಸಿದ್ದು ಗುಟ್ಟಾಗೇನೂ ಉಳಿದಿಲ್ಲ, ಪೆನ್ ಡ್ರೈವ್ ಗಳು ಅವರ ಬಳಿಯಲ್ಲೇ ಇದ್ದ ಸಂಗತಿಯನ್ನು ತಾನು ಹೇಳುತ್ತಿಲ್ಲ, ಅದರೆ ಕೆಲ ಕಾಂಗ್ರೆಸ್ ನಾಯಕರ ಹಾಗೆ ಮಾತಾಡಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಪ್ರಜ್ವಲ ರೇವಣ್ಣರನ್ನು ಬೆಂಬಲಿಸುವ ಪ್ರಶ್ನೆ ಬಿಜೆಪಿ ಮುಂದೆ ಉದ್ಭವಿಸಲ್ಲ, ರಾಜ್ಯ ಸರ್ಕಾರ ಈಗಾಗಲೇ ಎಸ್ಐಟಿಯನ್ನು ರಚಿಸಿದೆ, ಕಾನೂನು ರೀತ್ಯಾ ಅವರ ವಿರುದ್ಧ ಕ್ರಮ ಜರುಗುತ್ತದೆ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಚಿವ ತಿಮ್ಮಾಪುರ, ಶ್ರೀಕೃಷ್ಟನನ್ನು ಉಲ್ಲೇಖಿಸಿರುವುದು ಅತ್ಯಂತ ಖಂಡನೀಯ: ಮಾಳವಿಕಾ ಅವಿನಾಶ್