ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಚಿವ ತಿಮ್ಮಾಪುರ, ಶ್ರೀಕೃಷ್ಟನನ್ನು ಉಲ್ಲೇಖಿಸಿರುವುದು ಅತ್ಯಂತ ಖಂಡನೀಯ: ಮಾಳವಿಕಾ ಅವಿನಾಶ್
ಸಚಿವರು ಆಡಿದ ಮಾತು ನಾಡಿನ ಸಮಸ್ತ ಹಿಂದೂಗಳ ಭಾವನೆ ಧಕ್ಕೆಯುಂಟು ಮಾಡಿದೆ. ಕಾಂಗ್ರೆಸ್ ನಾಯಕರು ಹಿಂದೂಗಳು ಹಾಗೂ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದನ್ನು ಯಾವುದೇ ಹಿಂದೂ ಸಹಿಸಲಾರ, ಅವರ ಧೋರಣೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸುತ್ತೇನೆ ಎಂದು ಮಾಳವಿಕಾ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಸುದ್ದಿಗೊಷ್ಟಿ ನಡೆಸಿ ಮಾತಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಳವಿಕಾ ಅವಿನಾಶ್ (Malavika Avinash) ಅವರು ಸಚಿವ ಅರ್ ಬಿ ತಿಮ್ಮಾಪುರ (RB Timmapur) ಅವರು ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ತಿಮ್ಮಾಪುರ ಅವರು ಪ್ರಜ್ವಲ್ ಪ್ರಕರಣವನ್ನು ಶ್ರೀಕೃಷ್ಣನಿಗೆ ಹೋಲಿಸಿ ಮಾತಾಡಿದ್ದಾರೆ. ಈ ವಿಷಯವಾಗಿ ಮಾತಾಡಿದ ಮಾಳವಿಕಾ, ಕಾಂಗ್ರೆಸ್ ನಾಯಕರಿಗೆ ಹಿಂದೂ ಧರ್ಮದಲ್ಲಿ ನಂಬಿಕೆಯಿಲ್ಲ, ಅದು ಅವರ ವಿವೇಚನೆಗೆ ಬಿಟ್ಟ ಸಂಗತಿ, ಅದನ್ನು ನಾವು ಪ್ರಶ್ನಿಸುವುದಿಲ್ಲ, ಅದರೆ, ಅಶ್ಲೀಲ ವಿಡಿಯೋಗಳ ಸಂದರ್ಭದಲ್ಲಿ ಶ್ರೀಕೃಷ್ಣನ ಹೆಸರು ಉಲ್ಲೇಖಿಸುವುದು ಅತ್ಯಂತ ಖಂಡನೀಯ. ಸಚಿವರು ಆಡಿದ ಮಾತು ನಾಡಿನ ಸಮಸ್ತ ಹಿಂದೂಗಳ ಭಾವನೆ ಧಕ್ಕೆಯುಂಟು ಮಾಡಿದೆ. ಕಾಂಗ್ರೆಸ್ ನಾಯಕರು ಹಿಂದೂಗಳು ಹಾಗೂ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದನ್ನು ಯಾವುದೇ ಹಿಂದೂ ಸಹಿಸಲಾರ, ಅವರ ಧೋರಣೆಯನ್ನು ಕಟುವಾದ ಶಬ್ದಗಳಲ್ಲಿ ಖಂಡಿಸುತ್ತೇನೆ ಎಂದು ಮಾಳವಿಕಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಮುಸ್ಲಿಂ ಧರ್ಮಕ್ಕೆ ಬಂದರಷ್ಟೇ ಪ್ರೀತಿಸುತ್ತೇನೆ ಎನ್ನುವುದಾದರೆ ಅದು ಯಾವ ರೀತಿಯ ಪ್ರೀತಿ’; ಮಾಳವಿಕಾ ಅವಿನಾಶ್ ಪ್ರಶ್ನೆ