WhatsApp Warning: ಕಿರಿಕಿರಿ ಮಾಡಿದ್ರೆ ದೇಶ ಬಿಟ್ಟು ಹೋಗ್ತೇವೆ ಎಂದ ವಾಟ್ಸ್ಆ್ಯಪ್
ವಾಟ್ಸ್ಆ್ಯಪ್ ಕಾಲ್, ಮೆಸೇಜ್ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಎಂದು ಹೇಳುತ್ತದೆ. ವಾಟ್ಸ್ಆ್ಯಪ್ ಮೆಸೇಜ್ಗಳನ್ನು ಟ್ರೇಸ್ ಮಾಡಲು ಆಗುವುದಿಲ್ಲ. ಆ ರೀತಿ ಟ್ರೇಸ್ ಮಾಡಲಾಗುವಂತೆ ಎನ್ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗುತ್ತದೆ.
ವಾಟ್ಸ್ಆ್ಯಪ್ ಬಳಕೆದಾರರ ಖಾಸಗಿತನ ರಕ್ಷಣೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಜತೆಗೆ ವಾಟ್ಸ್ಆ್ಯಪ್ ಕಾಲ್, ಮೆಸೇಜ್ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಎಂದು ಹೇಳುತ್ತದೆ. ವಾಟ್ಸ್ಆ್ಯಪ್ ಮೆಸೇಜ್ಗಳನ್ನು ಟ್ರೇಸ್ ಮಾಡಲು ಆಗುವುದಿಲ್ಲ. ಆ ರೀತಿ ಟ್ರೇಸ್ ಮಾಡಲಾಗುವಂತೆ ಎನ್ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗುತ್ತದೆ. ಮೆಸೇಜ್ ಟ್ರೇಸಿಂಗ್ಗೆ ಬಲವಂತ ಪಡಿಸಿದರೆ ಭಾರತದಿಂದ ತನ್ನ ವ್ಯವಹಾರಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ವಾಟ್ಸ್ಆ್ಯಪ್ ಸಂಸ್ಥೆ ಹೇಳಿದೆ. ಫೇಸ್ಬುಕ್ನ ಸೋದರಸಂಸ್ಥೆಯಾದ ವಾಟ್ಸ್ಆ್ಯಪ್ ಇತ್ತೀಚೆಗೆ ದೆಹಲಿ ಹೈಕೋರ್ಟ್ ವಿಚಾರಣೆಯಲ್ಲಿ ಈ ವಿಚಾರದಲ್ಲಿ ತನ್ನ ಅಭಿಪ್ರಾಯಗಳನ್ನು ತಿಳಿಸಿದೆ.
Latest Videos