AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prajwal Revanna case: ಪ್ರಜ್ವಲ್ ದುಬೈಯಿಂದ ಬೆಂಗಳೂರುಗೆ ಬರುವ ಮಾಹಿತಿ, ವಿಮಾನ ನಿಲ್ದಾಣದಲ್ಲೇ ಬಂಧನ ಸಾಧ್ಯತೆ!

Prajwal Revanna case: ಪ್ರಜ್ವಲ್ ದುಬೈಯಿಂದ ಬೆಂಗಳೂರುಗೆ ಬರುವ ಮಾಹಿತಿ, ವಿಮಾನ ನಿಲ್ದಾಣದಲ್ಲೇ ಬಂಧನ ಸಾಧ್ಯತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 06, 2024 | 11:17 AM

ಆದರೆ ಇದುವರೆಗೆ ಅವರು ಬಂದಿಲ್ಲ ಮತ್ತು ಈಗ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರ ಬಂಧಿಸಲಿದ್ದಾರೆ ಎಂಬ ಮಾಹಿತಿ ಸಹ ಇದೆ. ಏತನ್ಮಧ್ಯೆ, ಇದೇ ಪ್ರಕರಣ ಮತ್ತು ಮಹಿಳೆಯೊಬ್ಬರನ್ನು ಅಪಹರಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ತಂದೆ ಮತ್ತು ಶಾಸಕ ಹೆಚ್ ಡಿ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ನಿನ್ನೆಯಿಂದ ಈ ವದಂತಿ ಕೇವಲ ಕರ್ನಾಟಕ ಮಾತ್ರವಲ್ಲ, ದೇಸ ದೆಲ್ಲೆಡೆ ಹರಡಿದೆ. ಲೈಂಗಿಕ ಅತ್ಯಾಚಾರದ ಟೇಪುಗಳು ಬಿಡುಗಡೆಯಾದ ಬಳಿಕ ಪ್ರಜ್ವಲ್ ರೇವಣ್ಣ (Prajwal Revanna) ವಿದೇಶಕ್ಕೆ ಪರಾರಿಯಾಗಿದ್ದು ಹಳೆಯ ಸುದ್ದಿ, ಆದರೆ ಈಗ ಅವರು ಸ್ವದೇಶಕ್ಕೆ ಮರಳಲಿದ್ದಾರೆ ಅಂತ ಸುದ್ದಿ ಬಂದಿದೆ. ಹಾಗೆ ನೋಡಿದರೆ, ನಿನ್ನೆಯೇ ಅವರು ಬರುತ್ತಾರೆ ಅಂತ ಗೊತ್ತಾಗಿತ್ತು. ಪ್ರಜ್ವಲ್ ಜರ್ಮನಿಯಿಂದ (Germany) ದುಬೈಗೆ ಬಂದಿದ್ದಾರೆ ಮತ್ತು ಅಲ್ಲಿಂದ ಭಾರತಕ್ಕೆ ಬರಲಿದ್ದಾರೆ ಮತ್ತು ಬೆಂಗಳೂರು ಬದಲು ಮಂಗಳೂರಲ್ಲಿ (Mangaluru) ರವಿವಾರ ತಡರಾತ್ರಿ ಇಲ್ಲವೇ ಸೋಮವಾರ ಬೆಳಗಿನ ಜಾವ ಲ್ಯಾಂಡ್ ಆಗಲಿದ್ದಾರೆ ಅಂತಲೂ ಹೇಳಲಾಗಿತ್ತು. ಆದರೆ ಇದುವರೆಗೆ ಅವರು ಬಂದಿಲ್ಲ ಮತ್ತು ಈಗ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರ ಬಂಧಿಸಲಿದ್ದಾರೆ ಎಂಬ ಮಾಹಿತಿ ಸಹ ಇದೆ. ಏತನ್ಮಧ್ಯೆ, ಇದೇ ಪ್ರಕರಣ ಮತ್ತು ಮಹಿಳೆಯೊಬ್ಬರನ್ನು ಅಪಹರಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ತಂದೆ ಮತ್ತು ಶಾಸಕ ಹೆಚ್ ಡಿ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಮೇ 10ರೊಳಗೆ ವಿಚಾರಣೆಗೆ ಹಾಜರಾಗಲು ಪ್ರಜ್ವಲ್ ರೇವಣ್ಣ ನಿರ್ಧಾರ