Loading video

ಇನ್ನೊಂದು ತಿಂಗಳಲ್ಲಿ ಪ್ರಜ್ವಲ್​ ರೇವಣ್ಣ ಜೈಲಿನಿಂದ ಹೊರಬರ್ತಾರೆ: ಸೂರಜ್ ರೇವಣ್ಣ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 08, 2025 | 9:30 PM

ಎಂಎಲ್ಸಿ ಡಾ. ಸೂರಜ್ ರೇವಣ್ಣ ಅವರು ತಮ್ಮ ಸಹೋದರ ಪ್ರಜ್ವಲ್ ರೇವಣ್ಣ ಅವರು ಇನ್ನೊಂದು ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗುವುದಾಗಿ ಹೇಳಿದ್ದಾರೆ. ಅತ್ಯಾಚಾರ ಆರೋಪದಲ್ಲಿ ಜೈಲುಪಾಲಾಗಿರುವ ಪ್ರಜ್ವಲ್ ಅವರ ಬಿಡುಗಡೆಯ ಬಗ್ಗೆ ಸೂರಜ್ ರೇವಣ್ಣ ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ಮಾತನಾಡಿದ್ದಾರೆ. ಇದರಿಂದಾಗಿ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.

ಹಾಸನ, ಮಾರ್ಚ್​ 08: ಇನ್ನೊಂದು ತಿಂಗಳಲ್ಲಿ ಪ್ರಜ್ವಲ್​ ರೇವಣ್ಣ (Prajwal Revanna) ಜೈಲಿನಿಂದ ಹೊರಬರುತ್ತಾರೆ. ನಾವೆಲ್ಲರೂ ಸೇರಿಕೊಂಡು ಅವರನ್ನ ಸ್ವಾಗತ ಮಾಡೋಣ ಎಂದು ಎಂಎಲ್​ಸಿ ಡಾ.ಸೂರಜ್ ರೇವಣ್ಣ ಹೇಳಿದ್ದಾರೆ. ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ಮಾತನಾಡಿದ ಅವರು, ಇನ್ನೊಂದು ತಿಂಗಳಲ್ಲಿ ಪ್ರಜ್ವಲ್​ ಹೊರಬರ್ತಾರೆ, ತಲೆಕೆಡಿಸಿಕೊಳ್ಳಬೇಡಿ. ಇವತ್ತಿಗೆ ಪ್ರಪಂಚ ಮುಗಿದು ಹೋಗಿಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.