ಸಿದ್ದರಾಮಯ್ಯನವರಿಗೆ ತಗುಲಿದ ಕಳಂಕ ಹೋಗಲಾಡಿಸಲು ತಾಯಿಯವರು ಸೈಟು ವಾಪಸ್ಸು ಕೊಟ್ಟಿದ್ದು: ಯತೀಂದ್ರ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ, ದೇಶದ ಯಾವುದೇ ಮುಖ್ಯಮಂತ್ರಿ ಆಥವಾ ಹಣಕಾಸು ಸಚಿವ ಮಾಡದ ದಾಖಲೆ ಅವರ ಹೆಸರಿಗಾಗಿದೆ, ಶಾಸಕರು ಮತ್ತು ಹೈಕಮಾಂಡ್ ಅವರ ಪರವಾಗಿ ಇರೋದ್ರಿಂದ 5 ವರ್ಷ ಅವರೇ ಸಿಎಂ ಆಗಿ ಮುಂದುವರಿದು 19 ನೇ ಬಜೆಟ್ ಕೂಡ ಮಂಡಿಸಲಿದ್ದಾರೆ ಎಂದು ಯತೀಂದ್ರ ಹೇಳಿದರು.
ಮೈಸೂರು, ಮಾರ್ಚ್ 8: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮ ಕುಟುಂಬದಿಂದ ಯಾವುದೇ ಅವ್ಯವಹಾರ ನಡೆದಿಲ್ಲವೆಂದು ಲೋಕಾಯುಕ್ತ (Lokayukta) ದೃಢಪಡಿಸಿದೆ, ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿತ್ತು ಎಂದು ಎಮ್ಮೆಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಪ್ರಕರಣದಲ್ಲಿ ಜಾರಿ ನಿರ್ದೇಶನಾಯ ಪ್ರವೇಶಿಸುವ ಅಗತ್ಯವಿರಲಿಲ್ಲ, ಮನಿ ಲಾಂಡ್ರಿಂಗ್ ನಡೆದಲ್ಲಿ ಮಾತ್ರ ಇಡಿ ತನಿಖೆ ಮಾಡಬಹುದು, ರಾಜಕೀಯ ದುರುದ್ದೇಶ ಮತ್ತು ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಅದು ತನಿಖೆ ನಡೆಸಲು ಮುಂದಾಗಿತ್ತು ಎಂದು ಯತೀಂದ್ರ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯ ನಮ್ಮ ವರಿಷ್ಠರ ವಿರುದ್ಧ ಕಾಮೆಂಟ್ ಮಾಡೋದು ಬಿಟ್ಟು ತಮ್ಮ ತಂದೆಯ ಬಗ್ಗೆ ಮಾತಾಡಲಿ: ಡಿವಿ ಸದಾನಂದಗೌಡ
Latest Videos