ಪ್ರಮೋದ್ ಮುತಾಲಿಕ್​ರನ್ನು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸದಂತೆ ತಡೆಯಲಾಯಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2022 | 2:14 PM

ಮಂಗಳವಾರ ಕೊಲೆಯಾದ ಯುವ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಉದ್ದೇಶದಿಂದ ಬಂದಿರುವುದಾಗಿ ಮುತಾಲಿಕ್ ಹೇಳಿದರೂ ಪೊಲೀಸರು ಅವಕಾಶ ಕಲ್ಪಿಸಲಿಲ್ಲ.

ಉಡುಪಿ:  ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಮತ್ತು ಅವರ ಕಾರ್ಯಕರ್ತರನ್ನು ಉಡುಪಿ (Udupi) ಜಿಲ್ಲೆಯ ಹೆಜ್ಮಾಡಿ ಟೋಲ್ ಗೇಟ್ ಬಳಿ ತಡೆಯಲಾಯಿತು. ಅವರನ್ನು ದಕ್ಷಿಣ ಕನ್ನಡ ಪ್ರವೇಶಿಸದ ಹಾಗೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಮಂಗಳವಾರ ಕೊಲೆಯಾದ ಯುವ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಉದ್ದೇಶದಿಂದ ಬಂದಿರುವುದಾಗಿ ಮುತಾಲಿಕ್ ಹೇಳಿದರೂ ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ತಮ್ಮ ಕಾರ್ಯಕರ್ತರೊಂದಿಗೆ ಸರ್ಕಾರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಅವರು ಅಲ್ಲಿಂದ ವಾಪಸ್ಸಾದರು.