ಮಳೆ ಅವಾಂತರದಿಂದ ಶೂಟಿಂಗ್​ಗೆ ಬ್ರೇಕ್ ಹಾಕಿದ ದೇವರಾಜ್ ಮಗನ ಚಿತ್ರ ತಂಡ

| Updated By: ರಾಜೇಶ್ ದುಗ್ಗುಮನೆ

Updated on: Jul 09, 2024 | 8:23 AM

ದೇವರಾಜ್ ಕಿರಿಯ ಮಗ ಪ್ರಣಂ ದೇವರಾಜ್ ಅವರು ‘ಸನ್ ಆಪ್ ಮುತ್ತಣ್ಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕುಂಬಳಕಾಯಿ ಒಡೆಯಲು ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಬೆಂಗಳೂರಿನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಕೊನೆಯ ಹಂತದ ಶೂಟಿಂಗ್ ಮಾಡಲಾಗ್ತಿತ್ತು. ಮಳೆಯ ಕಾರಣದಿಂದ ಶೂಟಿಂಗ್​ಗೆ ಬ್ರೇಕ್ ಹಾಕಲಾಗಿದೆ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಅಬ್ಬರದ ಮಳೆಯ ಕಾರಣಕ್ಕೆ ಅನೇಕ ಅವಾಂತರಗಳು ಸೃಷ್ಟಿ ಆಗಿವೆ. ಮಳೆ ಆರ್ಭಟಕ್ಕೆ ಶೂಟಿಂಗ್ ಬ್ರೇಕ್ ಹಾಕಿದ ಘಟನೆಯೂ ನಡೆದಿದೆ. ದೇವರಾಜ್ ಪುತ್ರ ಪ್ರಣಂ ದೇವರಾಜ್ ಅವರು ‘ಸನ್ ಆಪ್ ಮುತ್ತಣ್ಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕುಂಬಳಕಾಯಿ ಒಡೆಯಲು ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಬೆಂಗಳೂರಿನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಕೊನೆಯ ಹಂತದ ಶೂಟಿಂಗ್ ಮಾಡಲಾಗ್ತಿತ್ತು. ಮಳೆಯ ಕಾರಣದಿಂದ ಶೂಟಿಂಗ್​ಗೆ ಬ್ರೇಕ್ ಹಾಕಲಾಗಿದೆ. ಪ್ರಣಂ ದೇವರಾಜ್ ಅವರಿಗೆ ಖುಷಿ ರವಿ ಜೊತೆಯಾಗಿದ್ದಾರೆ. ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.