ಕಣ್ಣಿನ ಆಸ್ಪತ್ರೆಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ ಪ್ರಶಾಂತ್ ನೀಲ್
ಆಂಧ್ರದ ನೀಲಕಂಠಪುರಂನಲ್ಲಿ ನಿರ್ಮಾಣ ಆಗುತ್ತಿರುವ ಎಲ್.ವಿ. ಪ್ರಸಾದ್ ಕಣ್ಣಿನ ಆಸ್ಪತ್ರೆಗೆ ಪ್ರಶಾಂತ್ ನೀಲ್ ಐವತ್ತು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
‘ಕೆಜಿಎಫ್ 2’ ನಿರ್ದೇಶಕ (KGF Chapter 2) ಪ್ರಶಾಂತ್ ನೀಲ್ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ವಿಶ್ವ ಮಟ್ಟದಲ್ಲಿ ಅವರ ಸಿನಿಮಾ ಸದ್ದು ಮಾಡಿದೆ. ಈಗ ಅವರು ಸಾಮಾಜಿಕ ಕೆಲಸ ಮಾಡುವ ಮೂಲಕ ಸುದ್ದಿ ಆಗಿದ್ದಾರೆ. ಆಂಧ್ರದ ನೀಲಕಂಠಪುರಂನಲ್ಲಿ ನಿರ್ಮಾಣ ಆಗುತ್ತಿರುವ ಎಲ್.ವಿ. ಪ್ರಸಾದ್ ಕಣ್ಣಿನ ಆಸ್ಪತ್ರೆಗೆ ಪ್ರಶಾಂತ್ ನೀಲ್ (Prashanth Neel) ಐವತ್ತು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.