‘ಸರ್ಕಾರಕ್ಕೆ ಹೊಸ ಆದಾಯ ತಂದು ಕೊಡ್ತಿದ್ದೇನೆ, ಈ ಫೈಲ್​ನಲ್ಲಿದೆ ಜಮೀರ್​ ಆಸ್ತಿ ದಾಖಲೆ’

[lazy-load-videos-and-sticky-control id=”fcYRfTVyiLc”] ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿಗೆ CCB ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರಶಾಂತ್ ‌ಸಂಬರಗಿ ವಿಚಾರಣೆಗೆಂದು CCB ಕಚೇರಿಗೆ ಆಗಮಿಸಿದರು. ಕಪ್ಪು ಫೈಲ್ ಹಿಡಿದು ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಬಂದ ಸಂಬರಗಿ ವಿಚಾರಣೆಗೆ ತೆರಳುವ ಮುನ್ನ ಶಾಸಕ ಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ. ಸರ್ಕಾರಕ್ಕೆ ನಾನು ಹೊಸ ಆದಾಯ ತಂದು ಕೊಡುತ್ತಿದ್ದೇನೆ ಎಂದು ಹೇಳಿದರು. ನನ್ನ ಫೈಲ್​ನಲ್ಲಿರುವ ದಾಖಲೆಯಿಂದ ಜಮೀರ್ […]

‘ಸರ್ಕಾರಕ್ಕೆ ಹೊಸ ಆದಾಯ ತಂದು ಕೊಡ್ತಿದ್ದೇನೆ, ಈ ಫೈಲ್​ನಲ್ಲಿದೆ ಜಮೀರ್​ ಆಸ್ತಿ ದಾಖಲೆ’
Edited By:

Updated on: Sep 12, 2020 | 2:27 PM

[lazy-load-videos-and-sticky-control id=”fcYRfTVyiLc”]

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿಗೆ CCB ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರಶಾಂತ್ ‌ಸಂಬರಗಿ ವಿಚಾರಣೆಗೆಂದು CCB ಕಚೇರಿಗೆ ಆಗಮಿಸಿದರು.
ಕಪ್ಪು ಫೈಲ್ ಹಿಡಿದು ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಬಂದ ಸಂಬರಗಿ ವಿಚಾರಣೆಗೆ ತೆರಳುವ ಮುನ್ನ ಶಾಸಕ ಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ. ಸರ್ಕಾರಕ್ಕೆ ನಾನು ಹೊಸ ಆದಾಯ ತಂದು ಕೊಡುತ್ತಿದ್ದೇನೆ ಎಂದು ಹೇಳಿದರು.

ನನ್ನ ಫೈಲ್​ನಲ್ಲಿರುವ ದಾಖಲೆಯಿಂದ ಜಮೀರ್ ಆಸ್ತಿಯನ್ನ ಸರ್ಕಾರಕ್ಕೆ ಕೊಡಿಸುತ್ತೇನೆ. 2019ರ ಜೂನ್​ 8, 9,10 ರಂದು ಜಮೀರ್​ ಅಹ್ಮದ್​ ಎಲ್ಲಿದ್ದರು? ಕೊಲಂಬೊದಲ್ಲಿದ್ದರು ಎಂಬುದಕ್ಕೆ ನನ್ನ ಬಳಿ ದಾಖಲೆ ಇದೆ ಎಂದು ಫೈಲ್​ ತೋರಿಸಿದರು. ಜೊತೆಗೆ, ಸತ್ಯಕ್ಕೆ ದೀಪಾ ಬೇಳಗ್ತಾ ಇದ್ದೀನಿ ಎಂದೂ ಸಹ ಹೇಳಿದರು.

ಇದನ್ನೂ ಓದಿ: ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಶಾಸಕ ಜಮೀರ್ ಹೇಳಿದ್ದೇನು?

ಶಾಸಕ ಜಮೀರ್​ಗೆ ಸಂಬರಗಿ ತಿರುಗೇಟು ನೀಡಿದ್ದು ನಿನ್ನೆ ಪ್ರಶಾಂತ್ ಮಾಡಿರುವ ಆರೋಪಗಳು ಸುಳ್ಳು ಅಂತಾ ಶಾಸಕ ಜಮೀರ್ ಅಹಮದ್​ ಹೇಳಿದ್ದರು. ಒಂದು ವೇಳೆ, ಆರೋಪ ನಿಜವಾದ್ರೆ ನನ್ನ ಆಸ್ತಿಯನ್ನ ಸರ್ಕಾರಕ್ಕೆ ಕೊಡ್ತೀನಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಾಂತ್​ ಸಂಬರಗಿ ಈ ಹೇಳಿಕೆ ನೀಡಿದ್ದಾರೆ.

Published On - 11:11 am, Sat, 12 September 20