ಕೊಲಂಬೊ ಕ್ಯಾಸಿನೋಗೆ ಹೋಗಿದ್ದೇನೆ, ಕುಮಾರಸ್ವಾಮಿ ಸಹ ಬಂದಿದ್ರು-ಜಮೀರ್​ ಬಾಂಬ್​!

ಕೊಲಂಬೊ ಕ್ಯಾಸಿನೋಗೆ ಹೋಗಿದ್ದೇನೆ, ಕುಮಾರಸ್ವಾಮಿ ಸಹ ಬಂದಿದ್ರು-ಜಮೀರ್​ ಬಾಂಬ್​!

[lazy-load-videos-and-sticky-control id=”0ZDTK9ckZjM”]

ನಾನು ಕೊಲಂಬೊಗೆ ಹೋಗಿದ್ದು ನಿಜ, ಹೋಗೋದು ತಪ್ಪಾ? ಎಂದು ಟಿವಿ9ಗೆ ಶಾಸಕ ಜಮೀರ್ ಅಹ್ಮದ್​ ಖಾನ್​​ ಪ್ರತಿಕ್ರಿಯೆ ನೀಡಿದ್ದಾರೆ. ಕೊಲಂಬೊ ಕ್ಯಾಸಿನೋಗೆ ಹೋಗಿದ್ದ ಬಗ್ಗೆ ಒಪ್ಪಿಕೊಂಡ ಜಮೀರ್ ಭೇಟಿಯ ಬಗ್ಗೆ ಟಿವಿ9 ಗೆ ಜಮೀರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿ ಒಂದೂವರೆ ವರ್ಷಕ್ಕೊಮ್ಮೆ ನಾನು ಕೊಲಂಬೊಗೆ ಹೋಗ್ತಿದ್ದೆ. ನಾನಷ್ಟೇ ಅಲ್ಲ, JDS​​ನಲ್ಲಿದ್ದಾಗ ಕುಮಾರಸ್ವಾಮಿ ಸಹ ಹೋಗಿದ್ದರು. ಜೊತೆಗೆ, JDS​​ನ 28 ಶಾಸಕರು ಸಹ ಕೊಲಂಬೊ ಕ್ಯಾಸಿನೊಗೆ ಹೋಗಿದ್ದರು. ನಾನು ಡ್ರಗ್ಸ್​​ ಜಾಲದಲ್ಲಿರುವುದು ಸಾಬೀತಾದ್ರೆ ನನ್ನನ್ನ ಗಲ್ಲಿಗೆ ಹಾಕಲಿ. ನನ್ನನ್ನು ಗಲ್ಲಿಗೆ ಹಾಕಲು ನ್ಯಾಯಾಧೀಶರಿಗೆ ಲಿಖಿತವಾಗಿ ಬರೆದುಕೊಡುವೆ ಅಂತಾ ಜಮೀರ್​ ಹೇಳಿದ್ದಾರೆ.

ವಿಕ್ರಂ ಆಸ್ಪತ್ರೆಯಲ್ಲಿ ಜಮೀರ್ ಅಹ್ಮದ್​ಗೆ ಮೆಡಿಕಲ್ ಟೆಸ್ಟ್
ಟಿವಿ 9 ಒಟ್ಟಗೆ ಮಾತನಾಡುವ ಮುನ್ನ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ವಿಕ್ರಂ ಆಸ್ಪತ್ರೆಯಲ್ಲಿ ಜಮೀರ್ ಅಹ್ಮದ್​ಗೆ ಮೆಡಿಕಲ್ ಟೆಸ್ಟ್ ನಡೆಸಲಾಯಿತು. ಶಾಸಕರಿಗೆ ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಗುಣಮುಖರಾದ ಬಳಿಕ ಭುಜದ ನೋವಿನಿಂದ ಬಳಲುತ್ತಿದ್ದ ಕಾರಣಕ್ಕೆ ತಪಾಸಣೆಗೆ ಒಳಗಾಗಿ ಆಸ್ಪತ್ರೆಯಿಂದ ವಾಪಸ್ ತೆರಳಿದರು.

ಇದನ್ನೂ ಓದಿ: ರೇವಣ್ಣ ಕೊಲಂಬೊ ಕ್ಯಾಸಿನೋಗೆ ಬಂದಿರಲಿಲ್ಲ; ಶಾಸಕ ಜಮೀರ್ ಕೊಟ್ಟ ಸರ್ಟಿಫಿಕೇಟ್

Click on your DTH Provider to Add TV9 Kannada