ಪ್ರತಾಪ್ ಸಿಂಹ ಸಂಸದರಾಗಿ ಸಣ್ಣತನ ಮತ್ತು ಅವಿವೇಕದ ಮಾತು ಆಡಬಾರದು: ವಾಟಾಳ್ ನಾಗರಾಜ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 23, 2022 | 1:41 AM

ಟಿಪ್ಪು ಎಕ್ಸ್​ಪ್ರೆಸ್ ಬಹಳ ವರ್ಷಗಳಿಂದ ಓಡಾಡುತ್ತಿರುವ ರೈಲಾಗಿದೆ ಮತ್ತು ಕೋಟ್ಯಾಂತರ ಜನ ಅದರಲ್ಲಿ ಓಡಾಡಿದ್ದಾರೆ. ಅದರ ಹೆಸರು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಂಸದರಾಗಿರುವ ಪ್ರತಾಪ್ ಸಿಂಹ, ಇಂಥ ಸಣ್ಣತನಕ್ಕಿಳಿಯದೆ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.

ಸಾರ್ವಜನಿಕ ಬದುಕಿಗೆ ಪ್ರವೇಶ ನೀಡಿದಾಗಿನಿಂದ ಕನ್ನಡ ಪರ ಚಳುವಳಿಗಳನ್ನು ನಡೆಸಿಕೊಂಡು ಬಂದಿರುವ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಂಗಳವಾರ ಮೈಸೂರಿನಲ್ಲಿ; ಸಂಸದ ಪ್ರತಾಪ್ ಸಿಂಹ ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿ ಮೈಸೂರಿನ ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರಿಡಬೇಕೆಂದು ಹೇಳಿರುವುದಕ್ಕೆ ಕೆಂಡ ಕಾರಿದರು. ಟಿಪ್ಪು ಎಕ್ಸ್​ಪ್ರೆಸ್ ಬಹಳ ವರ್ಷಗಳಿಂದ ಓಡಾಡುತ್ತಿರುವ ರೈಲಾಗಿದೆ ಮತ್ತು ಕೋಟ್ಯಾಂತರ ಜನ ಅದರಲ್ಲಿ ಓಡಾಡಿದ್ದಾರೆ. ಅದರ ಹೆಸರು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಂಸದರಾಗಿರುವ ಪ್ರತಾಪ್ ಸಿಂಹ, ಇಂಥ ಸಣ್ಣತನಕ್ಕಿಳಿಯದೆ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.

ಟಿಪ್ಪು ನಮ್ಮ ನಾಡಿನ ಮಹಾವೀರರಲ್ಲಿ ಒಬ್ಬರು, ಕನ್ನಂಬಾಡಿಯ ಶಂಕುಸ್ಥಾಪನೆ ನೆರವೇರಿಸಿದವರು, ದೇಶಕ್ಕಾಗಿ ತನ್ನಿಬ್ಬರು ಮಕ್ಕಳನ್ನು ಒತ್ತೆಯಿಟ್ಟ ಧೀರ. ಅವರ ಬಗ್ಗೆ ಹಗುರವಾಗಿ ಮಾತಾಡಬಾರದು, ಅವರನ್ನು ಗೌರವದಿಂದ ಉಲ್ಲೇಖಿಸಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು. ನಮ್ಮ ದೇಶದ ಪಾರ್ಲಿಮೆಂಟ್ ಮುಂದೆ ಟಿಪ್ಪು ಅವರ ಪ್ರತಿಮೆಯನ್ನು ಸ್ಥಾಪಿಸಬೇಕು, ಕನ್ನಡ ನಾಡಿನಿಂದ ಸಂಸತ್ತಿಗೆ ಆಯ್ಕೆಯಾಗಿರುವ ಪ್ರತಿನಿಧಿಗಳು ಪ್ರತಿಮೆ ಸ್ಥಾಪಿಸಲು ಹೋರಾಡಬೇಕು ಎಂದು ಅವರು ಹೇಳಿದರು.

ಮೈಸೂರು ಮಹಾರಾಜರ ಬಗ್ಗೆ ನಮಗೂ ಅಪಾರ ಗೌರವವಿದೆ, ಅದರೆ ಅವರ ಹೆಸರನ್ನು ಬೇರೆ ರೈಲುಗಳಿಗೆ ಇಲ್ಲವೇ ಮೈಸೂರು ರೇಲ್ವೇ ನಿಲ್ದಾಣಕ್ಕೆ ಇಡಬಹುದು. ಆದರೆ ಟಿಪ್ಪು ಹೆಸರು ತೆಗೆದು ಮೈಸೂರು ಮಹಾರಾಜರ ಹೆಸರು ಇಡಬೇಕೆಂದು ಹೇಳುವುದು ಸಣ್ಣತನ ಮತ್ತು ಅವಿವೇಕತನದ ಮಾತು. ಪ್ರತಾಪ್ ಸಿಂಹ ತಾವು ಮಾಡಿರುವ ಕೆಲಸಗಳ ಬಗ್ಗೆ ಬೇಕಿದ್ದರೆ ಮಾತಾಡಲಿ. ಹೆಸರು ಬದಲಾಯಿಸುವಂಥ ಮಾತುಗಳನ್ನು ಅವರು ಆಡಬಾರದು ಎಂದು ವಾಟಾಳ್ ನಾಗರಾಜ್ ಹೇಳಿದರು.

ಇದನ್ನೂಓದಿ:   ಹರಾಜಿನಲ್ಲಿ ಮಾರಾಟವಾಗಿಲ್ಲ, ನಮಗೆ ಬೇರೆ ಆಯ್ಕೆಗಳಿಲ್ಲ! ಭಾವನಾತ್ಮಕ ವಿಡಿಯೋ ಮೂಲಕ ಬಿಸಿಸಿಐಗೆ ಮನವಿ ಮಾಡಿದ ರೈನಾ