‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು

Updated on: Jul 29, 2025 | 7:09 PM

ತಮ್ಮ ಮೇಲೆ ಹಲ್ಲೆ ಯತ್ನ ನಡೆದ ಬಳಿಕ ನಟ ಪ್ರಥಮ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು (ಜುಲೈ 29) ಎಫ್​ಐಆರ್ ದಾಖಲಾಗಿದೆ. ಪ್ರಥಮ್ ಅವರಿಗೆ ಸೂಕ್ತ ಭದ್ರತೆ ನೀಡುವುದಾಗಿ ಪೊಲೀಸರು ಹೇಳಿದ್ದಾರೆ. ಈ ವೇಳೆ ಮಾಧ್ಯಮಗಳ ಎದುರಿನಲ್ಲೇ ಪ್ರಥಮ್ ಅವರು ಅಳಲು ತೋಡಿಕೊಂಡರು.

ತಮ್ಮ ಮೇಲೆ ದರ್ಶನ್ (Darshan) ಅಭಿಮಾನಿಗಳಿಂದ ಹಲ್ಲೆ ಯತ್ನ ನಡೆದ ಬಳಿಕ ನಟ ಪ್ರಥಮ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು (ಜುಲೈ 29) ಎಫ್​ಐಆರ್ ದಾಖಲಾಗಿದೆ. ಪ್ರಥಮ್ ಅವರಿಗೆ ಸೂಕ್ತ ಭದ್ರತೆ ನೀಡುವುದಾಗಿ ಪೊಲೀಸರು ಹೇಳಿದ್ದಾರೆ. ಈ ವೇಳೆ ಮಾಧ್ಯಮಗಳ ಎದುರಿನಲ್ಲೇ ಪ್ರಥಮ್ ಅವರು ಅಳಲು ತೋಡಿಕೊಂಡರು. ‘ಪೊಲೀಸ್ ರಕ್ಷಣೆಗಿಂತ ದೊಡ್ಡ ರಕ್ಷಣೆ ಬೇರೆ ಏನೂ ಇಲ್ಲ. ಆದರೆ ನಮ್ಮ ಮನೆ ಹತ್ತಿರ ರೌಡಿಗಳು ತೊಂದರೆ ಮಾಡುತ್ತಾನೇ ಇರುತ್ತಾರೆ. ಮನೆ ಹತ್ತಿರವೇ ಅಟ್ಯಾಕ್ ಆಗಿದೆ’ ಎಂದು ಪ್ರಥಮ್ (Pratham) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More