AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಬಂದು ಹೇಳಿಕೆ ನೀಡುವ ತನಕ ಉಪವಾಸ ಸತ್ಯಾಗ್ರಹ ಮಾಡ್ತೀನಿ: ಪ್ರಥಮ್

‘ಇದು ನನ್ನ ಜೀವನದ ಬಹಳ ದೊಡ್ಡ ನಿರ್ಧಾರ’ ಎಂದು ನಟ ಪ್ರಥಮ್ ಅವರು ಹೇಳಿದ್ದಾರೆ. ಬೆಂಗಳೂರು ಗ್ರಾಮಂತರ ಎಸ್​ಪಿ ಕಚೇರಿ ಎದುರು ಪ್ರಥಮ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ದರ್ಶನ್ ಬಂದು ಹೇಳಿಕೆ ನೀಡುವ ತನಕ ತಾವು ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

ದರ್ಶನ್ ಬಂದು ಹೇಳಿಕೆ ನೀಡುವ ತನಕ ಉಪವಾಸ ಸತ್ಯಾಗ್ರಹ ಮಾಡ್ತೀನಿ: ಪ್ರಥಮ್
Darshan, Pratham
ಮದನ್​ ಕುಮಾರ್​
|

Updated on: Jul 29, 2025 | 5:20 PM

Share

ನಟ ಪ್ರಥಮ್ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗೆ ಪ್ರಥಮ್ ಮೇಲೆ ದರ್ಶನ್ ಅಭಿಮಾನಿಗಳು (Darshan Fans) ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪ ಇದೆ. ಅದಕ್ಕೆ ಸಂಬಂಧಿಸಿದಂತೆ ಪ್ರಥಮ್ (Pratham) ಅವರು ಇಂದು (ಜುಲೈ 29) ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿ ಒಂದು ಮಹತ್ವದ ನಿರ್ಧಾರ ತಿಳಿಸಿದ್ದಾರೆ. ಚಿತ್ರರಂಗದ ಒಳಿತಿಗಾಗಿ, ಟ್ರೋಲ್ ವಿರುದ್ಧ ಹೋರಾಡಲು ತಾವು ಆಮರಣಾಂತ ಉಪವಾಸ ಸತ್ಯಾಗ್ರಹ (Hunger Strike) ಮಾಡುವುದಾಗಿ ಪ್ರಥಮ್ ತಿಳಿಸಿದ್ದಾರೆ. ದರ್ಶನ್ ಬಂದು ಹೇಳಿಕೆ ನೀಡುವ ತನಕ ಉಪವಾಸ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

‘ಇವತ್ತಿನಿಂದ ನಾನು ಇಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ. ಒಂದು ಹನಿ ನೀರು ಕೂಡ ಕುಡಿಯುತ್ತಿಲ್ಲ. ಯಾಕೆಂದರೆ, ಇದರ ಹಿಂದೆ ಇರುವವರು ಬಂದು ತನಿಖೆ ಮಾಡಬೇಕು. ದರ್ಶನ್ ಸರ್ ಬಂದು ಇಲ್ಲಿ ಹೇಳಿಕೆ ನೀಡಬೇಕು. ಇನ್ನೊಂದು ಸಲ ಪ್ರಥಮ್ ಸಹವಾಸಕ್ಕೆ ನಮ್ಮ ಫ್ಯಾನ್ಸ್ ಬರಲ್ಲ ಅಂತ ಅವರು ಹೇಳಬೇಕು’ ಎಂದಿದ್ದಾರೆ ಪ್ರಥಮ್.

‘ದರ್ಶನ್ ಬರುವ ತನಕ ಆಮರಣಾಂತ ಉಪವಾಸ ಸತ್ಯಾಗ್ರಹ. ಪ್ರಥಮ್ ಸತ್ತರೆ ಸಾಯ್ತಾನೆ ಎಂದರೆ ಸಾಯಲಿ ಬಿಡಿ. ಯಾರು ಏನೂ ಮಾಡೋಕೆ ಆಗಲ್ಲ. ನಾನು ಒಬ್ಬ ಸಾಯೋದರಿಂದ ಚಿತ್ರರಂಗಕ್ಕೆ ಒಳ್ಳೆಯದು ಆಗುತ್ತದೆ ಎಂದರೆ ಆಗಲಿ ಬಿಡಿ. ಕೆಲವು ಫೇಕ್ ಸೋಶಿಯಲ್ ಮೀಡಿಯಾ ಪೇಜ್​​ಗಳು ಇವೆ. ಡಿ ಡುಬಾಕ್ ನನ್ ಮಕ್ಕಳದ್ದು. 150-200 ಪೇಜ್​​ಗಳಲ್ಲಿ ಟ್ರೋಲ್ ಮಾಡಿಸುತ್ತಾ ಇದ್ದೀರಿ. ಅಷ್ಟೂ ಪೇಜ್​​ಗಳು ಡಿಲೀಟ್ ಆಗಬೇಕು’ ಎಂದು ಪ್ರಥಮ್ ಅವರು ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ
Image
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
Image
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
Image
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
Image
ಕರ್ನಾಟಕದ ಮುಖ್ಯ ಮಂತ್ರಿಯಾದ ನಟ ದರ್ಶನ್, ಪಕ್ಷ ಯಾವುದು ಗೊತ್ತೆ?

‘ನನಗೆ ಮಾತ್ರವಲ್ಲ ಸುದೀಪ್, ಯಶ್, ಗಣೇಶ್, ಪುನೀತ್, ಅಶ್ವಿನಿ ಪುನೀತ್ ರಾಜ್​ಕುಮಾರ್ ಬಗ್ಗೆ ಯಾರಾದ್ರೂ ಟ್ರೋಲ್ ಮಾಡಿದರೆ ಚೆನ್ನಾಗಿ ಇರಲ್ಲ. ಮುಂದೆ ಚಿತ್ರರಂಗ ಚೆನ್ನಾಗಿ ಇರಬೇಕು ಎಂದರೆ ನಾನು ಇವತ್ತು ಉಪವಾಸ ಕುಳಿತುಕೊಳ್ಳುತ್ತೇವೆ. ನೀವು (ದರ್ಶನ್) ಇಲ್ಲಿ ಬಂದು ಹೇಳಿಕೆ ನೀಡಬೇಕು. ನೀವು ಮಾಡಿಸಿದ್ದೀರಿ ಅಂತ ನಾನು ಹೇಳಲ್ಲ. ನಿಮ್ಮ ಜೊತೆ ಬ್ಯಾರಕ್​ನಲ್ಲಿ ಇದ್ದವರು ಇದರಲ್ಲಿ ಭಾಗಿ ಆಗಿದ್ದಾರೆ ಎಂದರೆ ನೀವು ಎಲ್ಲವನ್ನೂ ನೋಡಿಕೊಂಡು ಮಜಾ ತೆಗೆದುಕೊಳ್ಳುವುದಲ್ಲ’ ಎಂದು ದರ್ಶನ್​ಗೆ ಪ್ರಥಮ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ಫ್ಯಾನ್ಸ್ ವಿರುದ್ಧ ಸಮರ: ರಮ್ಯಾ ಬೆಂಬಲಕ್ಕೆ ನಿಂತ ಶಿವರಾಜ್ ಕುಮಾರ್

ಪ್ರಥಮ್ ಅವರು ಎಸ್​.ಪಿ. ಕಚೇರಿಗೆ ಬಂದು ಲಿಖಿತ ದೂರು ನೀಡಿದ್ದಾರೆ. ‘ನಿಮ್ಮ ಬ್ಯಾರಕ್​ನಲ್ಲಿ ಇದ್ದವರು ನನಗೆ ವೆಪನ್ ತೋರಿಸಿದ್ದಾರೆ ಎಂದರೆ ನೀವು ಬಂದು ಉತ್ತರ ನೀಡಬೇಕು’ ಎಂದು ದರ್ಶನ್​ಗೆ ಪ್ರಥಮ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.