ಸುದೀಪ್ ಬಿಗ್ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ಚಾಲ್ತಿಯಲ್ಲಿದ್ದು, ಈ ಸೀಸನ್ ಬಳಿಕ ಶೋ ಅನ್ನು ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ. ಆದರೆ ಸುದೀಪ್ ಏಕೆ ಬಿಗ್ಬಾಸ್ ನಿಂದ ದೂರಾಗುತ್ತಿದ್ದಾರೆ ಎಂದು ಯಾರಿಗೂ ಖಾತ್ರಿ ಇಲ್ಲ. ಇದೀಗ ಪ್ರಥಮ್, ಸುದೀಪ್ ಏಕೆ ಬಿಗ್ಬಾಸ್ ಬಿಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಒಳ್ಳೆ ಹುಡ್ಗ ಪ್ರಥಮ್, ಮಾಜಿ ಬಿಗ್ಬಾಸ್ ವಿನ್ನರ್. ಸುದೀಪ್ರಿಂದ ಹೊಗಳಿಸಿಕೊಂಡಿದ್ದೂ ಇದೆ, ಬೈಸಿಕೊಂಡಿದ್ದೂ ಇದೆ. ಬಿಗ್ಬಾಸ್ ವಿನ್ನರ್ ಆದ ಬಳಿಕವೂ ಕೆಲ ಬಾರಿ ಬಿಗ್ಬಾಸ್ ಮನೆಗೆ ಹೋಗಿ ಬಂದಿದ್ದಾರೆ ಪ್ರಥಮ್. ಇದೀಗ ಸುದೀಪ್, ತಾವಿನ್ನು ಬಿಗ್ಬಾಸ್ ಶೋ ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ಪ್ರಥಮ್, ಸುದೀಪ್, ಬಿಗ್ಬಾಸ್ ಬಿಡಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ಬಿಗ್ಬಾಸ್ ಶೂಟಿಂಗ್ ಮಾಡಲು ಸುದೀಪ್ ಪಡುವ ಕಷ್ಟ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಅಲ್ಲದೆ ಸುದೀಪ್ ಅವರು ಬಿಗ್ಬಾಸ್ ನಿರೂಪಣೆ ಮುಂದುವರೆಸಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 22, 2025 07:18 PM